Select Your Language

Notifications

webdunia
webdunia
webdunia
webdunia

ಕಾವೇರಿ ವಿಚಾರ: ಪ್ರಧಾನಿ ಮೋದಿ ಮೇಲೆ ವಿಶ್ವಾಸವಿದೆ ಎಂದ ದೇವೇಗೌಡ

ಕಾವೇರಿ ವಿಚಾರ: ಪ್ರಧಾನಿ ಮೋದಿ ಮೇಲೆ ವಿಶ್ವಾಸವಿದೆ ಎಂದ ದೇವೇಗೌಡ
ಬೆಂಗಳೂರು , ಭಾನುವಾರ, 2 ಅಕ್ಟೋಬರ್ 2016 (14:22 IST)
ಕಾವೇರಿ ವಿವಾದಕ್ಕೆ ಸಂಬಧಿಸಿದಂತೆ ಪ್ರಧಾನಿ ಮೋದಿ ಜತೆ ಮಾತನಾಡಿದ್ದೇನೆ, ಅವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಪ್ರಧಾನಿ , ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ ಅವರು ಹೇಳಿದ್ದಾರೆ.


 
ಪ್ರಧಾನಿ ಇಂದು ಮುಂಜಾನೆ ದೂರವಾಣಿ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ನಾನು ಕಾವೇರಿ ನದಿ ನೀರು ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಮತ್ತು ಮೋದಿ ಮೇಲೆ ವಿಶ್ವಾಸವಿದೆ. ಯಾರ ಮೇಲೂ ನನಗೆ ಅಪನಂಬಿಕೆ ಇಲ್ಲ ಎಂದಿದ್ದಾರೆ ಗೌಡರು.
 
ನಾಳಿನ ವಿಧಾನ ಮಂಡಲ ವಿಶೇಷ ಅಧಿವೇಶನದಲ್ಲಿ 3 ಪಕ್ಷಗಳು ಏನು ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣ. ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರ ನಡೆಸುತ್ತದೆ. ಹೀಗಾಗಿ ಯಾವ ಪಕ್ಷವನ್ನು ಓಲೈಸುವ ಅನಿವಾರ್ಯತೆ ಅವರಿಗಿಲ್ಲ ನಮ್ಮ ಸಮಸ್ಯೆಗೆ ಕೇಂದ್ರ ಸ್ಪಂದಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದ್ದಾರೆ.
 
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹಿಸಿ ನಿನ್ನೆ ಮಾಜಿ ಪ್ರಧಾನಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಮತ್ತು ಅನಂತ ಕುಮಾರ್ ಪ್ರಧಾನಿ ಮೋದಿ ಕಾವೇರಿ ವಿವಾದದ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ನಾವು ಕೂಡ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ರಾತ್ರಿ ಸತ್ಯಾಗ್ರವನ್ನು ಅಂತ್ಯಗೊಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

4ರ ಮಗುವಿನ ಮೇಲೆ 40 ವರ್ಷದವನಿಂದ ಕೀಚಕತನ