Select Your Language

Notifications

webdunia
webdunia
webdunia
webdunia

ಈ ಮಗು ಅಳುತ್ತಿದ್ದರೆ ರಕ್ತ ಕಣ್ಣೀರು ಬರುತ್ತೆ..! ವೈದ್ಯರು, ಪೋಷಕರಿಗೆ ಶಾಕ್

ಈ ಮಗು ಅಳುತ್ತಿದ್ದರೆ ರಕ್ತ ಕಣ್ಣೀರು ಬರುತ್ತೆ..! ವೈದ್ಯರು, ಪೋಷಕರಿಗೆ ಶಾಕ್
ಹೈದ್ರಾಬಾದ್ , ಭಾನುವಾರ, 9 ಜುಲೈ 2017 (07:37 IST)
ಹೈದರಾಬಾದ್`ನ 3 ವರ್ಷದ ಮಗುವೊಂದು ವೈದ್ಯರು ಮತ್ತು ಪೋಷಕರಿಗೆ ಅಕ್ಷರಶಃ ಭಯ ಹುಟ್ಟಿಸಿದ್ದಾಳೆ. ಇದಕ್ಕೆ ಕಾರಣ ಆಕೆ ಸುರಿಸುತ್ತಿರುವ ರಕ್ತ ಕಣ್ಣೀರು.

16 ತಿಂಗಳ ಹಿಂದೆ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗು ಅಹಾನಾ ಅಫ್ಜಲ್ ಮೂಗಲ್ಲಿ ರಕ್ತಸ್ರಾವ ಶುರುವಾಗಿತ್ತು. ವೈದ್ಯರು ಜ್ವರವನ್ನೇನೋ ತಗ್ಗಿಸಿದರು. ಆದರೆ, ಈಗ, ಬಾಯಿ, ಮೂಗು, ಕಣ್ಣು, ಗುಪ್ತಾಂಗಗಳಲ್ಲೂ ರಕ್ತಸ್ರಾವವಾಗುತ್ತಿದೆಯಂತೆ.
ಈ ಬಗ್ಗೆ ಎಎನ್`ಐಗೆ ಪ್ರತಿಕ್ರಿಯಿಸಿರುವ ವೈದ್ಯರು,  ಅಹಾನಾ ಅಪರೂಪದಲ್ಲಿ ಅಪರೂಪ ಎನ್ನಲಾದ ಹೆಮಟೈಡ್ರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ದಿನಗಳ ಚಿಕಿತ್ಸೆ ಬಳಿಕ ಸಮಸ್ಯೆಯಯನ್ನ ಸ್ವಲ್ಪ ಹತೋಟಿಗೆ ತರಲಾಗಿದ್ದು ಶಾಶ್ವತ ಪರಿಹಾರ ಸಾಧ್ಯವಿಲ್ಲವೆಂದು ವೈದ್ಯರು ಕೈಚೆಲ್ಲಿದ್ದಾರೆ.

`ವರ್ಷದ ಮಗುವಾಗಿದ್ದಾಗ ಆಕೆಯ ಮೂಗಿನಲ್ಲಿ ರಕ್ತಸ್ರಾವವಾಗುದರೊಂದಿಗೆ ಸಮಸ್ಯೆ ಆರಂಭವಾಯಿತು. ಆ ಸಂದರ್ಭ ಆಕೆ ನ್ಯುಮೋನಿಯಾದಿಂದ ಬಳಲುತ್ತಿದ್ದಳು. ವೈದ್ಯರ ಬಳಿಯೂ ಆಕೆಗೆ ಶಾಸ್ವತ ಪರಿಹಾರದ ಭರವಸೆ ಸಿಕ್ಕಿಲ್ಲ. ಇತರೆ ಆಸ್ಪತ್ರೆಗಳ ವ್ಯಧ್ಯರಿಂದಲೂ ನೆರವು ಪಡೆಯಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಿಗೆ ಬರಬೇಕೆಂದು ತಂದೆ ಮೊಹಮ್ಮದ್ ಮನವಿ ಮಾಡಿದ್ದಾರೆ.

ಕೃಪೆ: ಟೈಮ್ಸ್ ಆಫ್ ಇಂಡಿಯಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಕಿವುಡ ಮಕ್ಕಳಿಗೆ ಶ್ರವಣ ಸಾಧನ ದೇಣಿಗೆ: ಆದರೆ ಹಣವನ್ನೇ ಪಾವತಿಸದ ಶಶಿಕಲಾ