Select Your Language

Notifications

webdunia
webdunia
webdunia
webdunia

ಅಂಡರ್‌ವೇರ್‌ನಲ್ಲಿ 64,38,960 ಮೌಲ್ಯದ ಚಿನ್ನ ಸಾಗಿಸಿ ಸಿಕ್ಕಿಬಿದ್ದಳು

Hyderabad woman
ನವದೆಹಲಿ , ಮಂಗಳವಾರ, 23 ಆಗಸ್ಟ್ 2016 (12:55 IST)
ದುಬೈನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳನ್ನು ಸೋಮವಾರ ಬಂಧಿಸಿದ ಅಧಿಕಾರಿಗಳು 2 ಕೆಜಿ 160 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆಕೆ ತನ್ನ ಒಳ ಉಡುಪಿನಲ್ಲಿ 64,38,960 ರೂಪಾಯಿ ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ. 

ಬಂಧಿತ ಮಹಿಳೆಯನ್ನು ಫರ್ಹಾತ್ ಉನ್ನಿಸಾ ಎಂದು ಗುರುತಿಸಲಾಗಿದೆ ಎಂದು ಏರ್ ಇಂಟೆಲಿಜೆನ್ಸ್ ಯೂನಿಟ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಆಗಸ್ಟ್ 21 ಮತ್ತು 22ರ ನಡುವಿನ ರಾತ್ರಿ ಶಂಕೆಯ ಮೇಲೆ ಮಹಿಳಾ ಪ್ರಯಾಣಿಕಳನ್ನು ಪರೀಕ್ಷೆಗೊಳಪಡಿಸಲಾಯಿತು. ಆಗ ಆಕೆ ತನ್ನ ಒಳ ಉಡುಪಿನಲ್ಲಿ 2 ಕೆಜಿ- 160 ಗ್ರಾಂ ಚಿನ್ನವನ್ನು ಸಾಗಿಸುತ್ತಿರುವುದು ಪತ್ತೆಯಾಯ್ತು. ಚಿನ್ನವನ್ನು ವಶಪಡಿಸಿಕೊಂಡು ಆಕೆಯನ್ನುಬಂಧಿಸಲಾಯಿತು. ತನಿಖೆ ಪ್ರಗತಿಯಲ್ಲಿದೆ ಎಂದು ಎಐಯು ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂಘ ಪರಿವಾರವಲ್ಲ, ಚಡ್ಡಿ ಪರಿವಾರ: ರಮಾನಾಥ ರೈ