ಪತ್ನಿಯರನ್ನು ಅದಲು ಬದಲು ಮಾಡಿ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿದ ಪತಿರಾಯರು. ಆಮೇಲೆ ಆಗಿದ್ದೇನು ಗೊತ್ತಾ?

Webdunia
ಶುಕ್ರವಾರ, 7 ಡಿಸೆಂಬರ್ 2018 (11:39 IST)
ಲಕ್ನೋ : ಪತಿಯೊಬ್ಬ ತನ್ನ ಪತ್ನಿಯನ್ನು ಬದಲಿಸಿ ಆಕೆಯ ಸಹೋದರಿ ಜೊತೆ ಒಂದು ರಾತ್ರಿ ಕಳೆಯುವ ಪ್ಲಾನ್ ಮಾಡಿ, ಕೊನೆಗೆ ಅದಕ್ಕೆ ಪತ್ನಿ ನಿರಾಕರಿಸಿದಕ್ಕೆ ಆಕೆಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯಲ್ಲಿ ನಡೆದಿದೆ.


ವಿಶಾಲ್ ಇಂತಹ ನೀಚ ಕೆಲಸ ಮಾಡಿದ ಪಾಪಿ ಪತಿಯಾಗಿದ್ದು, ಈತನಿಗೆ ತನ್ನ ಪತ್ನಿಯ ಮೇಲೆ ಪ್ರೀತಿ ಇರಲಿಲ್ಲ. ಬದಲಾಗಿ ಆಕೆಯ ಸೋದರಿಯ ಮೇಲೆ ಆಸೆ ಇತ್ತು. ಈ ಕಡೆಯಲ್ಲಿ ಮೃತ ಮಹಿಳೆಯ ಸೋದರಿಯ ಪತಿಗೂ ಕೂಡ ಆಕೆಯ ಮೇಲೆ  ಪ್ರೀತಿ ಇರಲಿಲ್ಲ. ಬದಲಾಗಿ ಮೃತ ಮಹಿಳೆಯ ಮೇಲೆ ಆಸೆ ಇತ್ತು.


ಆದ್ದರಿಂದ ಪತಿ ಮಹಾಶಯರಿಬ್ಬರು ಸೇರಿ ತಮ್ಮ ಪತ್ನಿಯರನ್ನು ಅದಲು ಬದಲು ಮಾಡಿ ಒಂದು ರಾತ್ರಿ ಕಳೆಯಲು ಪ್ಲಾನ್ ಮಾಡಿ ತಮ್ಮ ಪತ್ನಿಯರಿಗೂ ತಿಳಿಸಿದ್ದರು. ಆದರೆ ಇದಕ್ಕೆ ಸೋದರಿ ಒಪ್ಪಿಗೆ ನೀಡಿದ್ದರೂ ಮೃತ ಮಹಿಳೆ ಮಾತ್ರ ಒಪ್ಪಿಕೊಳ್ಳಲಿಲ್ಲ. ಬದಲಾಗಿ ತನ್ನ ಗಂಡನಿಗೆ ಚಪ್ಪಲಿಯಿಂದ ಹೊಡೆದಿದ್ದಳು. ಇದರಿಂದ ಕೋಪಗೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.


ಸದ್ಯಕ್ಕೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ವಿಶಾಲ್ ನನ್ನು ಬಂಧಿಸಿದ್ದಾರೆ. ಹಾಗೇ ವಿಶಾಲ್ ಕೊಲೆ ಮಾಡುವಾಗ ಮೃತ ಮಹಿಳೆಯ ಸಹೋದರಿ ಹಾಗೂ ಪತಿ ಕೂಡ ಅಲ್ಲೇ ಇದ್ದ ಕಾರಣ ಅವರಿಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಪಾತಾಳಕ್ಕೆ ಕುಸಿಯುತ್ತಿದೆ: ಮಲ್ಲಿಕಾರ್ಜುನ ಖರ್ಗೆ ಬೇಡ, ಪ್ರಿಯಾಂಕ್ ಗಾಂಧಿ ಬಂದ್ರೆ ಸರಿ ಹೋಗುತ್ತೆ

ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

ಚೆಲುವರಾಯಸ್ವಾಮಿ ನೇತೃತ್ವದಲ್ಲಿ ದೆಹಲಿಗೆ ಕೈ ನಾಯಕರ ದಂಡು

ಬಿಬಿಎಂಪಿ ಖಾತಾ ಸರ್ಟಿಫಿಕೇಟ್ ಆನ್ ಲೈನ್ ನಲ್ಲಿ ಪಡೆಯುವುದು ಹೇಗೆ

Gen Z ಗಾಗಿ ಅಂಚೆ ಇಲಾಖೆಯಿಂದ ಹೊಸ ಪ್ಲ್ಯಾನ್: ಇಲ್ಲಿದೆ ಡೀಟೈಲ್ಸ್

ಮುಂದಿನ ಸುದ್ದಿ
Show comments