ಲಕ್ನೋ: ಇತ್ತೀಚೆಗೆ ನಡೆದಿದ್ದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಾನು ಬಯಸಿದವರಿಗೆ ವೋಟ್ ಹಾಕಲಿಲ್ಲವೆಂದು ಪತಿ, ಪತ್ನಿಯನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾನೆ. ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗ ಉತ್ತರ ಪ್ರದೇಶ ಡಿಜಿಪಿಗೆ ಪತ್ರ ಬರೆದಿದೆ.
ಮುಸ್ಲಿಂ ಮಹಿಳೆ ಪತಿ ಹಿಂಬಾಲಿಸುವ ಪಕ್ಷಕ್ಕೆ ವೋಟ್ ಹಾಕಿರಲಿಲ್ಲ. ಇದೇ ಕಾರಣಕ್ಕೆ ಸಿಟ್ಟಿನಲ್ಲಿ ಪತಿ ಆಕೆಗೆ ಮನಬಂದಂತೆ ಥಳಿಸಿ ಮನೆಯಿಂದ ಹೊರ ಹಾಕಿದ್ದಾನೆ. ಅಲ್ಲದೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ವಿಚಾರ ಮಹಿಳಾ ಆಯೋಗದ ಗಮನಕ್ಕೆ ಬಂದಿದ್ದು, ಏಳು ದಿನಗಳೊಳಗಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಇದೀಗ ಪೊಲೀಸರು ಘಟನೆಯ ತನಿಖೆ ನಡೆಸಲಿದ್ದಾರೆ.