ಇಲ್ಲಿ ಪತಿಯೊಬ್ಬ ಹೆಂಡತಿಯ ವಿಮಾ ಪಾಲಿಸಿಯ ಮೊತ್ತದಿಂದ ಸಾಲವನ್ನು ತೀರಿಸಲು ಆಕೆಯನ್ನು ಕೊಂದಿದ್ದಾನೆ. ಅಚ್ಚರಿ ಎಂದರೆ ಪತ್ನಿಯ ಹತ್ಯೆಗೂ ಮುನ್ನ ಪತಿಯೇ ಪತ್ನಿಗೆ 35 ಲಕ್ಷ ರೂ.ಗೆ ವಿಮೆ ಮಾಡಿಸಿದ್ದ.
ರಾಜ್ಗಢ್ ಜಿಲ್ಲೆಯ ಹೆಚ್ಚುವರಿ ಎಸ್ಪಿ ಮಂಕಮ್ನಾ ಪ್ರಸಾದ್ ಪ್ರಕಾರ, ಜುಲೈ 26 ರ ರಾತ್ರಿ 9 ಗಂಟೆಯ ಸುಮಾರಿಗೆ ಈ ಪ್ರಕರಣ ನಡೆದಿದೆ. ಜಿಲ್ಲೆಯ ಭೋಪಾಲ್ ರಸ್ತೆಯ ಮನಾ ಜೋಡ್ ಗ್ರಾಮದ ಬಳಿ ಪೂಜಾ ಮೀನಾ (27) ಎಂಬ ಮಹಿಳೆ ತನ್ನ ಪತಿ ಬದ್ರಿಪ್ರಸಾದ್ ಮೀನಾ (31) ಅವರೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ವಿಚಾರಣೆ ವೇಳೆ ತಾನು ನಾಲ್ವರಿಂದ ಸಾಲ ಪಡೆದಿದ್ದು, ಹಣ ವಾಪಸ್ ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.
ಪತ್ನಿಯೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಆ ನಾಲ್ವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತಿ ಪೊಲೀಸರಿಗೆ ತನ್ನ ಕಥೆಯಲ್ಲಿ ತಿಳಿಸಿದ್ದಾರೆ. ಈ ವೇಳೆ ಪತ್ನಿ ಮಧ್ಯಪ್ರವೇಶಿಸಿದಾಗ ಆರೋಪಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದೂ ತನಿಖೆ ವೇಳೆ ಹೇಳಿದ್ದಾನೆ. ಮಹಿಳೆಯ ಪತಿ ಹೇಳಿಕೆಯ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ವೇಳೆ ಮಹಿಳೆಗೆ ಕೆಲ ದಿನಗಳ ಹಿಂದೆ ವಿಮೆ ಮಾಡಿಸಿರುವುದು ತಿಳಿದು ಬಂದಿದೆ. ಇದಾದ ಬಳಿಕ ತನಿಖೆಯ ದಿಕ್ಕನ್ನು ಬದಲಾಯಿಸಲಾಯಿತು. ಇದಾಧ ಬಳಿಕ ಬಯಲಾದ ವಿ ಆರಗಳಿಂದ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚಿದ್ದಾರೆ.
ಕೊಲೆಗಾರ ಬೇರಾರೂ ಅಲ್ಲ ಮೃತಳ ಪತಿ ಎಂದು ತಿಳಿದುಬಂದಿದೆ. ಆರೋಪಿಯು ಮೊದಲು ಪತ್ನಿಗೆ ವಿಮೆ ಮಾಡಿಸಿ ನಂತರ ವಿಮಾ ಮೊತ್ತದಿಂದ ಸಾಲವನ್ನು ಮರುಪಾವತಿಸಲು ಆಕೆಯನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.