Select Your Language

Notifications

webdunia
webdunia
webdunia
webdunia

ಪತ್ನಿ ಆದಾಯದ ಮೇಲೆ ಪತಿ ಕಣ್ಣು! ಮುಂದೇನಾಯ್ತು?

ಪತ್ನಿ ಆದಾಯದ ಮೇಲೆ ಪತಿ ಕಣ್ಣು! ಮುಂದೇನಾಯ್ತು?
ನವದೆಹಲಿ , ಶುಕ್ರವಾರ, 12 ನವೆಂಬರ್ 2021 (09:59 IST)
ತನ್ನ ಗಂಡ ನಿರುದ್ಯೋಗಿ, ಕುಡುಕ, ದೈಹಿಕವಾಗಿ ಹಿಂಸಿಸುತ್ತಾನೆ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾನೆ ಎಂದು ದೂರಿ ಮಹಿಳೆಯೊಬ್ಬಳು ವಿಚ್ಚೇದನ ಕೋರಿದ್ದಳು.
ಈ ಪ್ರಕರಣದಲ್ಲಿ ಎರಡೂ ಪಕ್ಷದವರು ಬಡತನದ ಹಿನ್ನೆಲೆಗೆ ಸೇರಿದವರು. ಪತಿ ಮತ್ತು ಪತ್ನಿಗೆ ಕ್ರಮವಾಗಿ, 13 ವರ್ಷ ವಯಸ್ಸಿದ್ದಾಗ ಈ ವಿವಾಹವನ್ನು ನೆರವೇರಿಸಲಾಗಿತ್ತು. ದೆಹಲಿ ಹೈ ಕೋರ್ಟ್ , ಪತಿಯಿಂದ ಮಾನಸಿಕ ಕ್ರೌರ್ಯ ಅನುಭವಿಸುತ್ತಿದ್ದ ಕಾರಣದ ಆಧಾರದ ಮೇಲೆ ಓರ್ವ ದಂಪತಿಗೆ ವಿಚ್ಚೇದನಕ್ಕೆ ಅನುಮತಿ ನೀಡಿದೆ. ಪತಿ ತನ್ನ ಪತ್ನಿಯನ್ನು “ಹಣದ ಹಸು” ವಿನಂತೆ ಕಾಣುತ್ತಿದ್ದನು ಮತ್ತು ದೆಹಲಿ ಪೋಲಿಸ್ ಇಲಾಖೆಯಲ್ಲಿ ಆಕೆಗೆ ಕೆಲಸ ದೊರೆತ ಬಳಿಕವಷ್ಟೇ ಆಕೆಯಲ್ಲಿ ಆಸಕ್ತನಾದನು ಎಂಬುದನ್ನು ಗಮನಿಸಿದ ನಂತರ ನ್ಯಾಯಾಲಯ ಈ ಆಜ್ಞೆ ನೀಡಿದೆ.
ನ್ಯಾಯ ಮೂರ್ತಿ ವಿಪಿನ್ ಸಂಘಿ ನೇತೃತ್ವದ ಪೀಠವು, ಯಾವುದೇ ಭಾವನಾತ್ಮಕ ಸಂಬಂಧಗಳಿಲ್ಲದ , ಐಹಿಕ ಮನೋಭಾವವು ಪತ್ನಿಗೆ ಮಾನಸಿಕ ಯಾತನೆ ಮತ್ತು ಆಘಾತವನ್ನು ಉಂಟು ಮಾಡುತ್ತದೆ, ಇದು ಅವಳ ಮೇಲೆ ಕ್ರೌರ್ಯವನ್ನು ಉಂಟು ಮಾಡಲು ಸಾಕಾಗುತ್ತದೆ ಎಂದು ಹೇಳಿದೆ. ಕುಟುಂಬವನ್ನು ಆರಂಭಿಸುವುದು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿರುತ್ತದೆ, ಆದರೆ ಈ ಪ್ರಕರಣದಲ್ಲಿ ಗಂಡನಿಗೆ “ಮದುವೆಯನ್ನು ಪೋಷಿಸುವ ಮನಸ್ಸಿಲ್ಲ, ಆದರೆ ಹೆಂಡತಿಯ ಆದಾಯದ ಮೇಲೆ ಮಾತ್ರ ಆಸಕ್ತಿ ಇರುವಂತೆ” ಕಾಣುತ್ತಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನು ಕೂಡ ಒಳಗೊಂಡ ಪೀಠವು ಹೇಳಿದೆ.
ದೆಹಲಿ ಹೈಕೋರ್ಟ್, ಪತ್ನಿಯ ವಿಚ್ಚೇದನದ ಅರ್ಜಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಲಯ ಆದೇಶವನ್ನು ತಳ್ಳಿಹಾಕಿತು, ಮತ್ತು ಹಿಂದೂ ವಿವಾಹ ಕಾಯ್ದೆಯಡಿ ಆ ದಂಪತಿಯ ನಡುವಿನ ಮದುವೆಯನ್ನು ವಿಸರ್ಜಿಸಿತು. ತನ್ನ ಗಂಡ ನಿರುದ್ಯೋಗಿ, ಕುಡುಕ, ದೈಹಿಕವಾಗಿ ಹಿಂಸಿಸುತ್ತಾನೆ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾನೆ ಎಂದು ದೂರಿ ಆಕೆ ವಿಚ್ಚೇದನ ಕೋರಿದ್ದಳು. ಈ ಪ್ರಕರಣದಲ್ಲಿ ಎರಡೂ ಪಕ್ಷದವರು ಬಡತನದ ಹಿನ್ನೆಲೆಗೆ ಸೇರಿದವರು. ಪತಿ ಮತ್ತು ಪತ್ನಿಗೆ ಕ್ರಮವಾಗಿ, 13 ವರ್ಷ ವಯಸ್ಸಿದ್ದಾಗ ಈ ವಿವಾಹವನ್ನು ನೆರವೇರಿಸಲಾಗಿತ್ತು. 2005 ರ ನಂತರವೂ, ನವಂವರ್ 2014 ರ ವರೆಗೆ ಅಂದರೆ , ಆಕೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಒಂದು ಕೆಲಸ ಸಿಗುವ ವರೆಗೂ ಗಂಡನ ಮನೆಗೆ ಕರೆದುಕೊಂಡು ಹೋಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಕಾಡುತ್ತಿದ್ದ ಯವಕ