Publish Date: Wed, 03 Oct 2018 (10:01 IST)
Updated Date: Wed, 03 Oct 2018 (10:04 IST)
ತೆಲಂಗಾಣ: ಬೆಳೆದ ಬೆಳೆ ಕಣ್ಣೆದುರೇ ನಾಶವಾದ ಬೇಸರದಲ್ಲಿ ವಿಷ ಕುಡಿದ ಪತ್ನಿಯನ್ನು ಬದುಕಿಸಲು ತೆಲಂಗಾಣದ ಬುಡಕಟ್ಟು ಪ್ರದೇಶದ ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಓಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೆಲಂಗಾಣದ ರಾಥೋಡ್ ರಾಮ್ ಎಂಬಾತ ತನ್ನ ಪತ್ನಿ ಪುಷ್ಪಲತಾಳನ್ನು ಬದುಕಿಸಲು ಹೆಗಲ ಮೇಲೆ ಹೊತ್ತು ಸುಮಾರು ಮೂರು ಕಿ.ಮೀ. ಓಡಿದ್ದ. ಆದರೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಪಕ್ಕದಲ್ಲಿ ಎಲ್ಲೂ ಆಸ್ಪತ್ರೆಯಿಲ್ಲದ ಕಾರಣ ಕಾಡು ಮೇಡಿನ ಮುಳ್ಳು ಹಾದಿಯಲ್ಲಿ ವಿಷ ಕುಡಿದ ಪತ್ನಿಯನ್ನು ಹೆಗಲ ಮೇಲೆ ಹೊತ್ತು ರಾಮ್ ಓಡಿದ್ದ. ಭಾರೀ ಮಳೆಯಿಂದಾಗಿ ಇವರು ಬೆಳೆದಿದ್ದ ಹತ್ತಿ ಬೆಳೆ ಸಂಪೂರ್ಣ ನಾಶವಾಗಿ ನಷ್ಟವಾಗಿತ್ತು. ಇದೇ ಬೇಸರದಲ್ಲಿ ಪುಷ್ಪಲತಾ ವಿಷ ಸೇವಿಸಿದ್ದಳು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.