Publish Date: Thu, 08 Jun 2017 (09:55 IST)
Updated Date: Thu, 08 Jun 2017 (10:01 IST)
ಉತ್ತರಪ್ರದೇಶ: ಹಸಿವು ಮನುಷ್ಯನಾಗಲಿ, ಪ್ರಾಣಿಯನ್ನಾಗಲಿ ಎಂತಹ ಪರಿಸ್ಥಿತಿಗೆ ತರುತ್ತದೆ ಎನ್ನುವುದು ಈ ಘಟನೆ ಸಾಕ್ಷಿ. ಹಸಿವು ತಾಳದೆ ಇಲ್ಲೊಂದು ಮೇಕೆ ಮಾಲಿಕನ ನೋಟುಗಳ ಕಂತೆಯನ್ನೇ ಗುಳುಂ ಮಾಡಿದ ಘಟನೆ ನಡೆದಿದೆ.
ಸರ್ವೇಶ್ ಕುಮಾರ್ ಪೌಲ್ ಎನ್ನುವ ಉತ್ತರ ಪ್ರದೇಶದ ಗ್ರಾಮವೊಂದರ ನಿವಾಸಿ ಈ ಮೇಕೆಯ ಮಾಲಿಕ. ಇವರ ಮೇಕೆ ಸರ್ವೇಶ್ ಸ್ನಾನಕ್ಕೆಂದು ಹೋಗಿದ್ದಾಗ ಕೋಟಿನ ಜೇಬಿನಲ್ಲಿದ್ದ ಸುಮಾರು 62 ಸಾವಿರ ರೂ. ಮೌಲ್ಯದ ನೋಟಿನ ಕಂತೆಯನ್ನೇ ನುಂಗಿದೆ.
ಸ್ನಾನ ಮುಗಿಸಿ ಮಾಲಿಕ ಬರುವಷ್ಟರಲ್ಲಿ 2000 ರೂ.ಗಳ ನೋಟಿನ ಕಂತೆಯಲ್ಲಿ ಸುಮಾರು 31 ನೋಟುಗಳನ್ನು ಮೇಕೆ ತಿಂದು ಮುಗಿಸಿತ್ತು. ಇದೀಗ ಎರಡು ನೋಟುಗಳ ಉಳಿದುಕೊಂಡಿದೆಯಂತೆ. ಅದೂ ಚಿಂದಿಯಾದ ಸ್ಥಿತಿಯಲ್ಲಿದೆಯಂತೆ! ಅಷ್ಟಕ್ಕೂ ಸುಮ್ಮನೇ ಹೇಳ್ತಾರಾ ಆಡು ಮುಟ್ಟದ ಸೊಪ್ಪಿಲ್ಲ ಅಂತ!