Select Your Language

Notifications

webdunia
webdunia
webdunia
webdunia

ಆಪ್ ಸರ್ಕಾರಕ್ಕೆ ದೊಡ್ಡ ಹಿನ್ನಡೆ: ಉಪರಾಜ್ಯಪಾಲರೇ ದೆಹಲಿಯ ಆಡಳಿತಾತ್ಮಕ ಮುಖ್ಯಸ್ಥ

Kejriwal
ನವದೆಹಲಿ , ಗುರುವಾರ, 4 ಆಗಸ್ಟ್ 2016 (17:43 IST)
ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮ್ಮ ರಾಜ್ಯದ ಉಪರಾಜ್ಯಪಾಲರ ಜತೆ ಸದಾ ಕಚ್ಚಾಟ ನಡೆಸುತ್ತಲೇ ಕಾಣಿಸಿಕೊಳ್ಳುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬಹುದೊಡ್ಡ ಹಿನ್ನಡೆಯಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್​ಜಿ) ಅವರ ಅಧಿಕಾರಗಳನ್ನು ಪ್ರಶ್ನಿಸಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾ ಮಾಡಿದ್ದು, ‘ಲೆಫ್ಟಿನೆಂಟ್ ಗವರ್ನರ್ ರಾಜ್ಯ ಸಚಿವ ಸಂಪುಟದ ಸೂಚನೆಯಂತೆ ಕಾರ್ಯ ನಿರ್ವಹಿಸಬೇಕು ಎನ್ನುವುದು ಒಪ್ಪತಕ್ಕದ್ದಲ್ಲ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿರುವ ಹೈಕೋರ್ಟ, ದೆಹಲಿಯ ಪೊಲೀಸ್, ಕಾನೂನು ಸುವ್ಯವಸ್ಥೆ ಕೇಂದ್ರದ ಅಡಿಯೇ ಉಳಿಯುತ್ತದೆ ಎಂದು ಹೇಳಿದೆ.

ಉಪರಾಜ್ಯಪಾಲರು ಸಮ್ಮ ಸರ್ಕಾರದ ಮೇರೆಗೆ ಕಾರ್ಯ ನಿರ್ವಹಿಸಬೇಕು ಎಂಬ ಆಪ್ ಸರ್ಕಾರದ ಪ್ರತಿಪಾದನೆಯು ಯಾವುದೇ ಆಧಾರವಿಲ್ಲದ್ದು. ಅದನ್ನು ಒಪ್ಪಲಾಗುವುದಿಲ್ಲ. ಉಪರಾಜ್ಯಪಾಲರೇ ರಾಷ್ಟ್ರ ರಾಜಧಾನಿ ಪ್ರದೇಶದ ಆಡಳಿತಾತ್ಮಕ ಮುಖ್ಯಸ್ಥ’ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಸಂವಿಧಾನದ 239ನೇ ವಿಧಿಯ ಪ್ರಕಾರ ದೆಹಲಿ ಕೇಂದಾಡಳಿತ ಪ್ರದೇಶವಾಗಿಯೇ ಉಳಿಯಲಿದೆ ಎಂದಿರುವ ಕೋರ್ಟ್ ಉಪರಾಜ್ಯಪಾಲರಿಗೆ ಮಾಹಿತಿ ನೀಡದೇ ಸಚಿವ ಸಂಪಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಮೂಳೆ ಮುರಿದು ಕೊಂಡಿದ್ದಾರೆಯೇ ಸೋನಿಯಾ ಗಾಂಧಿ?