ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸೋದರೆ ಸೊಸೆ ದೀಪಾರಿಗೆ ಎಐಎಡಿಎಂಕೆ ಮುಖಂಡರು ಮಣೆ ಹಾಕುತ್ತಿರುವುದರಿಂದ ಶಶಿಕಲಾ ಗ್ಯಾಂಗ್‌ನಲ್ಲಿ ತಳಮಳ ಆರಂಭವಾಗಿದೆ.
ನಗರಕ್ಕೆ ಆಗಮಿಸುತ್ತಿರುವ ದೀಪಾ ಅವರನ್ನು ಸ್ವಾಗತಿಸಲು ಕುರುಚಿ ಪ್ರದೇಶದಲ್ಲಿ ಅವರ ಬೃಹತ್ ಕಟೌಟ್ ಹಾಕಲಾಗಿದ್ದು ಎಐಎಡಿಎಂಕೆ ನಾಯಕಿಯಾಗಿ ಒಪ್ಪಲು ಸಿದ್ದರಿರುವುದಾಗಿ ಕಾರ್ಯಕರ್ತರು ಈಗಾಗಲೇ ಘೋಷಿಸಿದ್ದಾರೆ.
ಜಯಲಲಿತಾ ಅವರ ಆಶೀರ್ವಾದ ಹೊಂದಿರುವ ದೀಪಾ ಅವರ ನಾಯಕತ್ವ ತಮಿಳುನಾಡು ರಾಜ್ಯಕ್ಕೆ ಆಗತ್ಯವಾಗಿದೆ ಎಂದು ಎಐಎಡಿಎಂಕೆ ನಾಯಕರು ಹೇಳಿಕೆ ನೀಡಿರುವುದು ಪಕ್ಷ ಇಬ್ಬಾಗವಾಗಲಿದೆಯೇ ಎನ್ನುವ ಆತಂಕ ಕಾಡುತ್ತಿದೆ.
ಏತನ್ಮಧ್ಯೆ, ಜಯಲಲಿತಾ ಅವರ ದೀರ್ಘಕಾಲದ ಗೆಳತಿಯಾಗಿದ್ದ ಶಶಿಕಲಾ ಅವರ ಪೋಸ್ಟರ್‌ಗಳಿಗೆ ಕೆಲವರು ಮಸಿಬಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವಾರಗಳಿಂದ ಜಯಾ ಸೋದರ ಸೊಸೆ ದೀಪಾ ಅವರ ಬಗ್ಗೆ ಎಐಎಡಿಎಂಕೆ ವಲಯದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಶಶಿಕಲಾ ಬೆಂಬಲಿಗರು ಕೂಡಾ ಪಕ್ಷದ ಹೊಣೆಯನ್ನು ಹೊತ್ತುಕೊಳ್ಳುವಂತೆ ಶಶಿಕಲಾ ಅವರನ್ನು ಒತ್ತಡ ಹೇರುತ್ತಿದ್ದಾರೆ.
ಜಯ ಆಶೀರ್ವಾದ ಪಡೆದಿರುವ ದೀಪಾರನ್ನು ತಮಿಳರಿಗೆ ಮಾರ್ಗದೀಪವಾಗಲಿದ್ದಾರೆ. ಅಧಿಕಾರ ನಡೆಸಲೆಂದೆ ಹುಟ್ಟು ಬಂದವರಾಗಿದ್ದಾರೆ ಎಂದು ದೀಪಾ ಬೆಂಬಲಿಗರು ವರ್ಣಿಸುತ್ತಿದ್ದಾರೆ.
60 ವರ್ಷ ವಯಸ್ಸಿನ ಶಶಿಕಲಾ ಜಯಲಲಿತಾ ಅವರೊಂದಿಗೆ ಮೂರು ದಶಕಗಳ ಕಾಲ ಜೊತೆಯಲ್ಲಿದ್ದು ಎಐಎಡಿಎಂಕೆ ಪಕ್ಷದಲ್ಲಿ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.