Publish Date: Tue, 16 Dec 2025 (10:14 IST)
Updated Date: Tue, 16 Dec 2025 (10:17 IST)
ಇಂದು ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾ ಪಂಟರ್ ಗಳೇ. ಅದರಲ್ಲೂ ಇನ್ ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿ ಹಾಕುವುದನ್ನೇ ಎಷ್ಟೋ ಜನ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ ಸ್ಟಾಗ್ರಾಂ ಫಾಲೋವರ್ ಗಳ ಸಂಖ್ಯೆ ಹೆಚ್ಚಿಸುವುದು ಹೇಗೆ ಎಂದು ತಿಳಿಯಿರಿ.
ಇನ್ ಸ್ಟಾಗ್ರಾಂನಿಂದ ವಿರಾಟ್ ಕೊಹ್ಲಿಯಂತಹ ಸ್ಟಾರ್ ಗಳು ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾರೆ ಎಂದಾಗ ನಮಗೂ ಫಾಲೋವರ್ ಗಳ ಸಂಖ್ಯೆ ಹೆಚ್ಚಿಸಿ ರೀಲ್ಸ್, ಪೋಸ್ಟ್ ಮೂಲಕ ದುಡ್ಡು ಮಾಡಬೇಕು ಎಂದು ಆಸೆಯಾಗುತ್ತದೆ.
ಹಾಗಿದ್ದರೆ ಇನ್ ಸ್ಟಾಗ್ರಾಂ ಫಾಲೋವರ್ ಸಂಖ್ಯೆ ಹೆಚ್ಚಿಸುವುದು ಹೇಗೆ?
ನಿಯಮಿತವಾಗಿ ಪೋಸ್ಟ್ ಮಾಡಿ: ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರತಿನಿತ್ಯವೂ ಪೋಸ್ಟ್ ಮಾಡುತ್ತಿರಬೇಕು. ಯಾವಾಗಲೋ ಒಮ್ಮೆ ಎಂಬಂತೆ ಪೋಸ್ಟ್ ಮಾಡುತ್ತಿದ್ದರೆ ಕ್ಲಿಕ್ ಆಗದು.
ಗುಣಮಟ್ಟದ ಫೋಟೋ,ವಿಡಿಯೋ: ನೀವು ಪ್ರಕಟಿಸುವ ವಿಡಿಯೋ, ಫೋಟೋ ಕ್ಲಾರಿಟಿ ಗುಣಮಟ್ಟದ್ದಾಗಿರಲಿ.
ಕೀ ವರ್ಡ್ಸ್: ನೀವು ಮಾಡುವ ಪೋಸ್ಟ್ ಗಳಿಗೆ ಸೂಕ್ತ ಹ್ಯಾಶ್ ಟ್ಯಾಗ್ ಮೂಲಕ ಕೀ ವರ್ಡ್ ಗಳನ್ನು ಕೊಡಿ. ಇದರಿಂದ ನಿಮ್ಮ ಪೋಸ್ಟ್ ಹೆಚ್ಚು ಜನರಿಗೆ ರೀಚ್ ಆಗುತ್ತದೆ. ನಿಮ್ಮ ಪೋಸ್ಟ್ ಗೆ ಸಂಬಂಧಪಟ್ಟವರೊಂದಿಗೆ ಸಹಭಾಗಿತ್ವ, ಟ್ಯಾಗ್ ಮಾಡಿ.
ಪ್ರಮೋಟ್ ಮಾಡಿ: ನಿಮ್ಮ ಖಾತೆಯನ್ನು ಇತರೆ ಸೋಷಿಯಲ್ ಮೀಡಿಯಾ ವೇದಿಕೆ ಮೂಲಕ ಪ್ರಮೋಟ್ ಮಾಡಿ. ನಿಮ್ಮ ಖಾತೆಯನ್ನು ಯಾರು ವೀಕ್ಷಿಸುತ್ತಿದ್ದಾರೆ ಎಂದು ತಿಳಿದುಕೊಂಡು ಅಂತಹ ಕಂಟೆಂಟ್ ಗಳನ್ನೇ ಕೊಡಿ.
ಸ್ಟೋರಿ ಹಾಕಿ: ನೀವು ಹಾಕುವ ಪೋಸ್ಟ್ ಗಳ ಲಿಂಕ್ ಅಥವಾ ಸ್ಟೋರಿಗಳನ್ನು ಪ್ರಕಟಿಸುತ್ತಿರಿ.
ಇಂತಹ ಪೋಸ್ಟ್ ಹಾಕಿ: ಆದಷ್ಟು ತಮಾಷೆಯ, ಮನರಂಜನೆ ನೀಡುವ, ಎಜುಕೇಟ್ ಮಾಡುವ, ಉಪಯುಕ್ತ ಮಾಹಿತಿ ನೀಡುವ ಪೋಸ್ಟ್ ಗಳು ಜನರನ್ನು ಆಕರ್ಷಿಸುತ್ತವೆ.