ನವದೆಹಲಿ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಪಡೆಯಲು ಇನ್ನು ಕಿಸಾನ್ ಐಡಿ ಕಾರ್ಡ್ ಕಡ್ಡಾಯವಾಗಿದೆ. ಇದನ್ನು ಮಾಡಿಸುವುದು ಹೇಗೆ? ಇಲ್ಲಿದೆ ವಿವರ.
ಕಿಸಾನ್ ಐಡಿ ಕಾರ್ಡ್ ನಲ್ಲಿ ರೈತರ ಎಲ್ಲಾ ಭೂಮಿ, ಕೃಷಿಗೆ ಸಂಬಂಧಿಸಿದ ವಿವರಗಳ ಮಾಹಿತಿ ಸಿಗುತ್ತದೆ. ಈ ಕಾರಣಕ್ಕೆ ಇನ್ನು ಮುಂದೆ ಕೃಷಿಗೆ ಸಂಬಂಧಪಟ್ಟ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕಿಸಾನ್ ಕಾರ್ಡ್ ಕಡ್ಡಾಯ ಮಾಡಲಾಗುತ್ತದೆ.
ಕಿಸಾನ್ ಐಡಿ ಕಾರ್ಡ್ ಅಥವಾ ಕಿಸಾನ್ ಪೆಹಚಾನ್ ಕಾರ್ಡ್ ಮಾಡಿಸಲು ಕೆಲವೊಂದು ದಾಖಲೆಗಳು ಬೇಕಾಗುತ್ತದೆ. ಅರ್ಹ ರೈತರಿಗೆ ಸರ್ಕಾರದ ಯೋಜನೆಯ ಲಾಭ ಸಿಗುವಂತಾಗಲು ಈ ಕಾರ್ಡ್ ಕಡ್ಡಾಯಗೊಳಿಡಲಾಗುತ್ತಿದೆ. ಸದ್ಯಕ್ಕೆ ಇದು ಕರ್ನಾಟಕದಲ್ಲಿ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೆ ಕಡ್ಡಾಯ ನಿಯಮವಾಗಿ ಜಾರಿಗೆ ಬರಲಿದೆ.
ಏನೆಲ್ಲಾ ದಾಖಲೆಗಳು ಬೇಕು?
ಆಧಾರ್ ಕಾರ್ಡ್ ಅಥವಾ ಮತದಾರರ ಚೀಟಿ, ಡ್ರೈವಿಂಗ್ ಲೈಸೆನ್ಸ್ ನಂತಹ ಗುರುತಿನ ಚೀಟಿ
ಎರಡು ಪಾಸ್ ಪೋರ್ಟ್ ಸೈಝ್ ಫೋಟೋ
ಭೂಮಿ ದಾಖಲಾತಿ
ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಹತ್ತಿರದ ರೈತ ಸಹಾಯ ಕೇಂದ್ರ ಅಥವಾ ಎಂಬ www.mkisan.gov.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.