ನವದೆಹಲಿ: ಎಲ್ಲರಿಗೂ ಸೇವಿಂಗ್ಸ್ ಖಾತೆ ಎಂಬುದೊಂದು ಇದ್ದೇ ಇರುತ್ತದೆ. ಬ್ಯಾಂಕ್ ನಲ್ಲಿ ಸೇವಿಂಗ್ಸ್ ಖಾತೆಗೆ ವೇತನ ಕ್ರೆಡಿಟ್ ಆಗೋದು ಸಾಮಾನ್ಯ. ಆದರೆ ಸೇವಿಂಗ್ಸ್ ಖಾತೆಯಲ್ಲಿ ಗರಿಷ್ಠ ಎಷ್ಟು ಹಣ ಇಟ್ಟುಕೊಳ್ಳಬಹುದು ಗೊತ್ತಾ?
ನಿಮ್ಮ ಸೇವಿಂಗ್ಸ್ ಖಾತೆಯಲ್ಲಿ ಹೆಚ್ಚು ಹಣ ಇಟ್ಟುಕೊಳ್ಳುವುದು ಸುರಕ್ಷಿತವಲ್ಲ. ಇತ್ತೀಚೆಗಿನ ದಿನಗಳಲ್ಲಿ ಆನ್ ಲೈನ್ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಇದು ಸುರಕ್ಷಿತವಲ್ಲ. ಇನ್ನೊಂದೆಡೆ ಸೇವಿಂಗ್ಸ್ ಖಾತೆಯಲ್ಲಿ ಹೆಚ್ಚು ಬಡ್ಡಿದರ ಇಲ್ಲ. ಈ ಕಾರಣಕ್ಕೆ ಇದು ಲಾಭದಾಯಕವೂ ಅಲ್ಲ. ಹಾಗಿದ್ದರೂ ಕೆಲವರು ಸೇವಿಂಗ್ಸ್ ಖಾತೆಯಲ್ಲಿ ಹಣ ಇಟ್ಟುಕೊಳ್ಳುತ್ತಾರೆ.
ಹೆಚ್ಚು ಆದಾಯ ಬರುವವರು, ವೇತನ ಇರುವವರು ಸೇವಿಂಗ್ಸ್ ಖಾತೆಯಲ್ಲಿ 10 ಲಕ್ಷ ರೂ.ಗಳಿಗಿಂತ ಹೆಚ್ಚು ಇಡುವಂತಿಲ್ಲ. ನಿಮ್ಮ ಸೇವಿಂಗ್ಸ್ ಖಾತೆಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚು ಹಣವಿದ್ದರೆ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಬಹುದು. ಒಂದು ಹಣಕಾಸು ವರ್ಷದಲ್ಲಿ ನಿಮ್ಮ ಎಲ್ಲಾ ಸೇವಿಂಗ್ಸ್ ಖಾತೆಯ ಒಟ್ಟು ಠೇವಣಿ 10 ಲಕ್ಷ ರೂ. ದಾಟಿದ್ದರೂ ಬ್ಯಾಂಕ್ ಗಳು ಇದನ್ನು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರುತ್ತದೆ. ಆಗ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ನೀಡುತ್ತದೆ.
ಒಂದು ವೇಳೆ ಈ ರೀತಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದರೆ ನಿಮ್ಮ ಹಣದ ಮೂಲದ ಪುರಾವೆಗಳನ್ನು ನೀಡಬೇಕಾಗುತ್್ತದೆ. ನಿಮ್ಮ ಹೂಡಿಕೆಗೆ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಹಣದ ಮೂಲದ ಬಗ್ಗೆ ಖಚಿತ ಮಾಹಿತಿಯಿಲ್ಲದಿದ್ದರೆ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.