Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಆಸಿಡ್ ಎರಚಿದ ಮೂವರು ಕಾಮುಕರು

ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಆಸಿಡ್ ಎರಚಿದ ಮೂವರು ಕಾಮುಕರು
ಕಾನ್ಪುರ್ , ಶನಿವಾರ, 27 ಆಗಸ್ಟ್ 2016 (16:52 IST)
ಅಲಹಾಬಾದ್ ಮೂಲದ 40 ವರ್ಷ ವಯಸ್ಸಿನ ಮಹಿಳೆಯ ಮೇಲೆ ಮೂವರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ್ದಲ್ಲದೇ ಆಕೆಯ ಮುಖದ ಮೇಲೆ ಆಸಿಡ್ ಎರಚಿ, ನಂತರ ರೈಲ್ವೆ ಟ್ರ್ಯಾಕ್ ಮೇಲೆ ಎಸೆದು ಪರಾರಿಯಾದ ಹೇಯ ಘಟನೆ ವರದಿಯಾಗಿದೆ.
 
ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆರೋಪಿಗಳು ಆಸಿಡ್ ಎರಚಿದ್ದರಿಂದ ಆಕೆಯ ಕಣ್ಣು, ಮುಖ ಮತ್ತು ಕುತ್ತಿಗೆಯ ಮೇಲೆ ಗಂಬೀರವಾದ ಸುಟ್ಟಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಗ್ಯಾಂಗ್‌ರೇಪ್‌ಗೊಳಗಾದ ಮಹಿಳೆಗೆ ಆಸಿುಡ್ ದಾಳಿಯಿಂದಾಗಿ ಮಾತನಾಡಲು ತೊಂದರೆ ಎದುರಾಗುತ್ತಿದೆ. ಆದಾಗ್ಯೂ ಸನ್ನೆ ಮೂಲಕ ಮೂವರು ಆರೋಪಿಗಳು ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಆಸಿಡ್ ದಾಳಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಲಭ್ ಮಾಥುರ್ ತಿಳಿಸಿದ್ದಾರೆ. 
 
ಮಹಿಳೆ ಸಂಪೂರ್ಣವಾಗಿ ಗುಣಮುಖಳಾಗಿ ಮಾತನಾಡುವಂತಾದಾಗ ತನಿಖೆಯನ್ನು ಮುಂದುವರಿಸಲಾಗುವುದು. ವೈದ್ಯಕೀಯ ಪರೀಕ್ಷೆಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.
 
ಕೆಲ ಸ್ಥಳೀಯರ ಪ್ರಕಾರ ಮಹಿಳೆ ಭಿಕ್ಷುಕಿಯಾಗಿದ್ದು ಎರಡು ದಿನಗಳ ಹಿಂದೆ ಕಾನ್ಪುರ್ ನಗರಕ್ಕೆ ಆಗಮಿಸಿದ್ದಳು ಎಂದು ಮಾಹಿತಿ ನೀಡಿದ್ದಾರೆ. ಆದರೆ, ಇತರ ಕೆಲವರ ಪ್ರಕಾರ ಮಹಿಳೆ ಉದ್ಯೋಗವನ್ನು ಅರಸಿ ನಾಲ್ಕು ದಿನಗಳ ಹಿಂದೆ ಅಲಹಾಬಾದ್‌ನಿಂದ ಕಾನ್ಪುರ್ ನಗರಕ್ಕೆ ಆಗಮಿಸಿದ್ದಳು ಎಂದು ತಿಳಿಸಿದ್ದಾರೆ.
 
ಕಲೆಕ್ಟರ್ ಗಂಜ್‌ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಲಭ್ ಮಾಥುರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಮೇಯರ್ ಸ್ಥಾನ: 'ಕೈ'ಗೆ ಕೈ ಕೊಡುತ್ತಾ ಜೆಡಿಎಸ್?