Webdunia - Bharat's app for daily news and videos

Install App

ಚಿನ್ನದ ನಿಧಿ ಆಸೆ ತೋರಿಸಿ ಪೋಷಕರ ಎದುರೇ ಪುತ್ರಿಯ ಮೇಲೆ ಅತ್ಯಾಚಾರ

Webdunia
ಶನಿವಾರ, 10 ಜೂನ್ 2017 (14:06 IST)
ಚಿನ್ನದ ನಿಧಿ ತೆಗೆದುಕೊಡುವುದಾಗಿ ಪೋಷಕರನ್ನು ನಂಬಿಸಿ ಅವರ 14 ವರ್ಷದ ಪುತ್ರಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಆರೋಪಿ ಕೃಷ್ಣ ಕುಮಾರ್ ಶರ್ಮಾ, ಬಾಲಕಿ ಕವಿತಾಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡುವ ಮುನ್ನ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ.
 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಚಂದ್ರ ಗೋಸ್ವಾಮಿ ಘಟನೆಯ ಬಗ್ಗೆ ಮಾಹಿತಿ ನೀಡಿ, ಬಾಲಕಿಯ ತಂದೆ ಮಹಾವೀರ್ ಪ್ರಸಾದ್ ಮಾಂತ್ರಿಕನನ್ನು ಸಂಪರ್ಕಿಸಿ ಮನೆಯಲ್ಲಿರುವ ನಿಧಿಯನ್ನು ತೆಗೆದುಕೊಡಲು ನೆರವು ನೀಡುವಂತೆ ಕೋರಿದ್ದಾರೆ. ಮಗಳನ್ನು ಬಲಿಕೊಡಲು ಸಿದ್ದವಾದರೆ ಐದು ಕೆಜಿ ಚಿನ್ನದ ನಿಧಿ ತೆಗೆದುಕೊಡುವುದಾಗಿ ಮಾಂತ್ರಿಕ ತಿಳಿಸಿದ್ದಾನೆ.
   
ಪೋಷಕರನ್ನು ಮತ್ತು ಬಾಲಕಿಯನ್ನು ಸ್ಥಳೀಯ ದೇವಾಲಯವೊಂದಕ್ಕೆ ಕರೆದುಕೊಂಡು ಹೋಗಿ ಕೆಲ ಪೂಜೆಗಳನ್ನು ಮಾಡಿದ್ದಾನೆ. ನಂತರ ಬಾಲಕಿಯನ್ನು ನಗ್ನಗೊಳಿಸಿ ಪೂಜೆ ಮಾಡಿದಂತೆ ನಾಟಕವಾಡಿದ್ದಾನೆ. ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪೋಷಕರ ಎದುರಿನಲ್ಲಿಯೇ  ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
 
ಸ್ವಲ್ಪ ಸಮಯದ ನಂತರ ನಿಮ್ಮ ಮಗಳು ಜೀವಂತವಾಗಿ ಬರುತ್ತಾಳೆ ಎಂದು ಪೋಷಕರಿಗೆ ಸುಳ್ಳು ಹೇಳಿ ಆರೋಪಿ ಮಾಂತ್ರಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
 
ಚಿನ್ನದ ವ್ಯಾಪಾರಿಯಾಗಿರುವ 55 ವರ್ಷ ವಯಸ್ಸಿನ ಮಹಾವೀರ್ ಪ್ರಸಾದ್, ಮಗಳು ಜೀವಂತವಾಗಿ ಬಾರದಿದ್ದನ್ನು ಕಂಡು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.  
 
ಪೊಲೀಸರು ನಿರ್ಜನ ಪ್ರದೇಶದಿಂದ ಬಾಲಕಿಯ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೋಸ್ಟ್ ಮಾರ್ಟಂ‌ ವರದಿ ಬಂದ ನಂತರ ಸಂಪೂರ್ಣ ಮಾಹಿತಿ ಲಭಿಸಲಿದೆ. ಪೋಷಕರನ್ನು ಮಾಂತ್ರಿಕನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments