ತಮಿಳುನಾಡಿನ ರಾಜ್ಯ ರಾಜಕೀಯದಲ್ಲಿ ಹೊಸ ಸುನಾಮಿ ಎದ್ದಿದೆ. ಪರಸ್ಪರರನ್ನು ಹಣಿಯಲು ಸರ್ವತಂತ್ರಗಳನ್ನು ಹೆಣೆಯಲಾಗುತ್ತಿದೆ. ಸಿಎಂ ಪನ್ನೀರ್ ಸೆಲ್ವಂ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮಧ್ಯೆ ಸಮರ ರೋಚಕ ಘಟ್ಟವನ್ನು ತಲುಪಿದೆ.
ಶಶಿಕಲಾಗೆ ತಿರುಗೇಟು ನೀಡಲು ಬಯಸಿರುವ ಸೆಲ್ವಂ , ದಿವಗಂತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ನಿವಾಸವನ್ನು ಸ್ಮಾರಕವಾಗಿ ಬದಲಾಯಿಸುವಂತೆ ಆದೇಶ ನೀಡಿದ್ದಾರೆ.
ಮತ್ತೊಂದೆಡೆ ಶಶಿಕಲಾ ಬೆಂಬಲಿಗರು ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸುವ ತಂತ್ರ ನಡೆಸಿ ರಹಸ್ಯ ಸಭೆಗಳನ್ನು ನಡೆಸುತ್ತಿರುವುದು ವರದಿಯಾಗಿದೆ.
ಶಶಿಕಲಾ ತಮ್ಮನ್ನು ಪಕ್ಷದಿಂದ ಉಚ್ಚಾಟಿಸುವ ಮುನ್ನವೇ ಅವರನ್ನು ಜಯಾ ನಿವಾಸದಿಂದ ಹೊರಹಾಕುವ ಕಾರ್ಯಕ್ಕೆ ಸೆಲ್ವಂ ಮುಂದಾಗಿದ್ದಾರೆ.ಅದರಂತೆ , ಜಯಾ ನಿವಾಸವನ್ನು ಸ್ಮಾರಕವಾಗಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.