ಭಾರತೀಯ ವಾಯುಸೇನೆಗೆ ಇಂದು ಐತಿಹಾಸಿಕ ದಿನವಾಗಿದ್ದು ಇಂದು ಮೂವರು ಮಹಿಳಾ ಫೈಟರ್ ಪೈಲಟ್‌ಗಳು ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಯಾಗುತ್ತಿದ್ದಾರೆ.
ಭಾವನಾ ಕಾಂತ್, ಮೋಹನಾ ಸಿಂಗ್ ಮತ್ತು ಅವನಿ ಚತುರ್ವೇದಿ ಎಂಬ ಮೂವರು ಮಹಿಳಾ ಪೈಲಟ್‌ಗಳು ಮೊದಲ ಮಹಿಳಾ ಫೈಟರ್ ಪೈಲಟ್‌ಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ.
ಹೈದರಾಬಾದಿನ ಹೊರವಲಯ ದುಂಡಿಗಲ್‌ನಲ್ಲಿರುವ ವಾಯುಸೇನೆ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಮೂವರು ವಾಯುಸೇನೆ ಫೈಟರ್ ಪೈಲಟ್‌ಗಳಾಗಿ ಸೇರ್ಪಡೆಯಾಗುತ್ತಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಭಾರತೀಯ ವಾಯುಪಡೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿ ಇದ್ದು, ಅವರು ಸರಕು ಸಾಗಣೆ ವಿಮಾನ, ಹೆಲಿಕಾಪ್ಟರ್‌ಗಳ ಚಾಲಕರಾಗಿದ್ದಾರೆಯೇ ಹೊರತು ಹೊರತು ಯುದ್ಧ ವಿಮಾನಗಳ ಪೈಲಟ್ ಆಗಿ ಸೇವೆಗೆ ಸೇರ್ಪಡೆಯಾಗುತ್ತಿರುವುದು ಇದೇ ಮೊದಲು.