Publish Date: Mon, 06 Nov 2023 (16:30 IST)
Updated Date: Mon, 06 Nov 2023 (18:54 IST)
ಕೇಂದ್ರ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತರಾಗಿ ಹೀರಾಲಾಲ್ ಸಾಮರಿಯಾ ಅಧಿಕಾರವಹಿಸಿಕೊಂಡಿದ್ದಾರೆ. ವೈಕೆ ಸಿನ್ಹಾ ಅವರ ಅಧಿಕಾರಾವಧಿ ಅಕ್ಟೋಬರ್ 3 ರಂದು ಕೊನೆಗೊಂಡ ನಂತರ ಈ ಉನ್ನತ ಹುದ್ದೆ ಖಾಲಿಯಾಗಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮರಿಯಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.