Publish Date: Sat, 11 Mar 2017 (17:32 IST)
Updated Date: Sat, 11 Mar 2017 (17:37 IST)
ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಹಿಂದೂ ಕಾರ್ಡ್ ಮತ್ತು ಆಡಳಿತ ವಿರೋಧಿ ಅಲೆ ಕಾರಣವೇ ಹೊರತು ನರೇಂದ್ರಮೋದಿ ಅಲೆಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಮಶಾನದ ವಿಚಾರ ಸೇರಿದಂತೆ ಉತ್ತರಪ್ರದೇಶದಲ್ಲಿ ಭಾವನಾತ್ಮಕ ಮತ್ತು ಧಾರ್ಮಿಕ ವಿಷಯಗಳನ್ನ ಬಿಜೆಪಿಯವರು ಎತ್ತಿ ಹಿಡಿದಿದ್ದರಿಂದ ಅವರಿಗೆ ಅನುಕೂಲವಾಗಿದೆ. ಮೋದಿ ಅಲೆ ಇದೆ ಎಂದಾದರೆ ಪಂಜಾಬ್, ಗೋವಾದಲ್ಲಿ ಯಾಕೆ ಕೆಲಸ ಮಾಡಲಿಲ್ಲ ಪ್ರಶ್ನಿಸಿದ್ದಾರೆ. ಜನರ ತೀರ್ಪನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಇದೇವೇಳೆ, ಅಖಿಲೇಶ್ ಕುಟುಂಬದ ಆಂತರಿಕ ಜಗಳ ಮತ್ತು ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದೆ ಎಂದರು. ಉತ್ತಾರಾಖಂಡ್`ನಲ್ಲಿ ಕಾಂಗ್ರೆಸ್ ಸೋಲಿಗೆ ಆಡಳಿತ ವಿರೋಧಿ ಅಲೆ ಕಾರಣ ಎಂದು ಸಿಎಂ ಒಪ್ಪಿಕೊಂಡಿದ್ದಾರೆ.