Publish Date: Sun, 30 Apr 2023 (11:03 IST)
Updated Date: Sun, 30 Apr 2023 (12:31 IST)
ನವದೆಹಲಿ : ಅದಾನಿ ಸಮೂಹದ ವಿರುದ್ಧದ ಹಿಂಡೆನ್ಬರ್ಗ್ ಸಂಶೋಧನಾ ವರದಿಯ ವಿವಾದದ ಕುರಿತು ತನಿಖೆ ನಡೆಸಲು ಆರು ತಿಂಗಳ ಅವಧಿ ವಿಸ್ತರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ.
ಈ ವರದಿಗೆ ಸಂಬಂಧಿಸಿದ ತನಿಖೆಗೆ ಸುಪ್ರೀಂ ಸೆಬಿಗೆ ಮಾರ್ಚ್ 2ರಂದು ಅನುಮತಿ ನೀಡಿತ್ತು. ಅದು ಮೇ 2ರಂದು ಪೂರ್ಣಗೊಳ್ಳಬೇಕಿತ್ತು. ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ಎ.ಎಂ ಸಪ್ರೆ ನೇತೃತ್ವದ ತಜ್ಞರ ಸಮಿತಿಯ ತನಿಖೆಯ ಜೊತೆಗೆ ಸೆಬಿ ತನಿಖೆಗೂ ಆದೇಶಿಸಲಾಗಿತ್ತು.
ತನಿಖೆ ಪೂರ್ಣಗೊಳಿಸಲು ಕಾಲವಕಾಶದ ಅಗತ್ಯವಿದೆ. ಇನ್ನೂ ಆರು ತಿಂಗಳು ಅವಕಾಶ ವಿಸ್ತರಣೆಗೆ ಸೆಬಿ ಶನಿವಾರ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ.