Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಹಿಜಬ್ ಪ್ರಕರಣ: ಸುಪ್ರೀಂಕೋರ್ಟ್ನಲ್ಲಿ 2 ಗಂಟೆ ಮಹತ್ವದ ವಿಚಾರಣೆ

webdunia
ಗುರುವಾರ, 8 ಸೆಪ್ಟಂಬರ್ 2022 (06:52 IST)
ನವದೆಹಲಿ : ಶಾಲಾ ವಿದ್ಯಾರ್ಥಿಗಳನ್ನು ಕರ್ನಾಟಕ ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ. ಜೈಲಿನಲ್ಲಿ ಕೈದಿಗಳಿಗೆ ಯಾವುದೇ ಹಕ್ಕುಗಳು ಇರುವುದಿಲ್ಲ, ಅದೇ ರೀತಿ ಶಾಲೆಗಳಿಗೆ ತೆರಳಿದಾಗ ಮಕ್ಕಳು ಶಿಕ್ಷಕರ ಕಸ್ಟಡಿಯಲ್ಲಿ ಇರುತ್ತಾರೆ.

ಅವರಿಗೂ ಹಕ್ಕುಗಳು ಇರುವುದಿಲ್ಲ ಎಂದು ಹೇಳಿದೆ. ಇದನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಒಂದು ನ್ಯಾಯಾಂಗ ಸಂಸ್ಥೆಯಾಗಿ ಹೈಕೋರ್ಟ್ ಇದನ್ನೆಲ್ಲ ಹೇಗೆ ಹೇಳುತ್ತದೆ? ಎಂದು ಹಿರಿಯ ವಕೀಲ ದೇವದತ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್ ಹಲವು ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಮುಂದಿಟ್ಟರು.

ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ಎರಡನೇ ದಿನದ ವಿಚಾರಣೆ ನಡೆಯಿತು. ವಕೀಲ ಕಾಮತ್ ಎರಡು ಗಂಟೆಗಳ ಕಾಲ ಸುದೀರ್ಘ ವಾದ ಮಂಡಿಸಿದರು. 

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಉಮೇಶ್ ಕತ್ತಿ ನೇರ ನುಡಿಯ ರಾಜಕಾರಣಿ- ಸಂಸದ ಪ್ರತಾಪ್ ಸಿಂಹ