Select Your Language

Notifications

webdunia
webdunia
webdunia
webdunia

ಸಿಎಂ ಯೋಗಿ ಆದಿತ್ಯನಾಥ್‌ಗೆ ಹೈಕೋರ್ಟ್ ಛೀಮಾರಿ

ಸಿಎಂ ಯೋಗಿ ಆದಿತ್ಯನಾಥ್‌ಗೆ ಹೈಕೋರ್ಟ್ ಛೀಮಾರಿ
ಅಲಹಾಬಾದ್ , ಮಂಗಳವಾರ, 1 ಆಗಸ್ಟ್ 2017 (16:27 IST)
ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಛೀಮಾರಿ ಹಾಕಿದೆ.
 
ಸೂಕ್ತವಾದ, ಸರಿಯಾದ ರೀತಿಯಲ್ಲಿ ಅಧಿಕಾರ ನಡೆಸಿ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವತ್ತ ಗಮನಹರಿಸಿ. ಪೊಲೀಸರ ದುರ್ಬಲ ತನಿಖೆಯಿಂದಾಗಿ ಅಪರಾಧಿಗಳು ಕಾನೂನಿನ ಚೌಕಟ್ಟು ಮೀರುತ್ತಿದ್ದಾರೆ ಎಂದು ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
 
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ, ಅತ್ಯಾಚಾರ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿವೆ. ಪೊಲೀಸ್ ಇಲಾಖೆ ಕೂಡಾ ಅಪರಾಧಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.
 
ಸರಕಾರದ ಪರವಾಗಿ ಕೋರ್ಟ್‌ನಲ್ಲಿ ಹಾಜರಾಗಬೇಕಿದ್ದ ಅಡ್ವೋಕೇಟ್ ಜನರಲ್ ದೈರುಹಾಜರಾಗಿದ್ದಾರೆ. ಸರಕಾರ ಇಂತಹ ಬೇಜವಾಬ್ದಾರಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಿ ಎಂದು ಸಿಎಂ ಯೋಗಿ ಆದಿತ್ಯನಾಥ್‌ಗೆ ಹೈಕೋರ್ಟ್ ಸಲಹೆ ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟನ್ ಮಿಲಿಟರಿಯಲ್ಲಿ ಸೆಕ್ಸ್ ಕಿರುಕುಳ: ಫೋಟೋ ಬಯಲಿಗಿಟ್ಟ ದಿಟ್ಟ ಮಹಿಳೆ