Select Your Language

Notifications

webdunia
webdunia
webdunia
webdunia

ಅಣ್ಣಾಡಿಎಂಕೆ ಶಾಸಕರ ನಾಪತ್ತೆ ಕುರಿತು ಪೊಲೀಸರ ಬಳಿ ವರದಿ ಕೇಳಿದ ಮದ್ರಾಸ್ ಹೈಕೋರ್ಟ್

ಅಣ್ಣಾಡಿಎಂಕೆ ಶಾಸಕರ ನಾಪತ್ತೆ ಕುರಿತು ಪೊಲೀಸರ ಬಳಿ ವರದಿ ಕೇಳಿದ ಮದ್ರಾಸ್ ಹೈಕೋರ್ಟ್
chennai , ಶುಕ್ರವಾರ, 10 ಫೆಬ್ರವರಿ 2017 (13:28 IST)
ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿರುವ ಅಣ್ಣಾಡಿಎಂಕೆಯ ಶಾಸಕರ ಕುರಿತಂತೆ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್, ಚೆನ್ನೈ ಪೊಲೀಸರಿಗೆ ತಾಕೀತು ಮಾಡಿದೆ. ಈ ಮಧ್ಯೆ, ಶಾಸಕರನ್ನ ಶಶಿಕಲಾ ಒತ್ತೆಯಾಳಾಗಿರಿಸಿಕೊಂಡಿದ್ದಾರೆ ಎಂದು ಪನ್ನೀರ್ ಸೆಲ್ವಂ ರಾಜ್ಯಪಾಲರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಅವರು ಗವರ್ನರ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.


ಪನ್ನೀರ್ ಸೆಲ್ವಮ ಮತ್ತು ಶಶಿಕಲಾ ನಡುವೆ ಅಧಿಕಾರದ ಜಿದ್ದಾಜಿದ್ದಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಭುಧವಾರವೇ ಲಕ್ಸುರಿ ಬಸ್`ಗಳಲ್ಲಿ ಶಾಸಕರನ್ನ ನಗರದ ಹೊರವಲಯದ ರೆಸಾರ್ಟ್ ಮತ್ತು ಹೋಟೆಲ್`ಗಳಿಗೆ ಸಾಗಿಸಲಾಗಿದೆ. ಗವರ್ನರ್ ಎದುರು ಬಲಾಬಲ ಸಾಬೀತುಪಡಿಸುವವರೆಗೂ ಅಲ್ಲಿಯೇ ಇರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಬಹಿರ್ದೆಸೆಗೆಂದು ಇಳಿದ ಶಾಸಕರೊಬ್ಬರು ತಪ್ಪಿಸಿಕೊಂಡು ಬಂದು ಪನ್ನೀರ್ ಸೆಲ್ವಂ ಮನೆ ಸೇರಿದ್ದರು. ಈ ಮಧ್ಯೆ, ಮಹಿಳಾ ಶಾಸಕರ ಪತಿಯೊಬ್ಬರು ಈ ಬಗ್ಗೆ ಹೈಕೋರ್ಟ್`ಗೆ ಅರ್ಜಿ ಸಲ್ಲಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಜೈಲಿಗೆ ಹೋದಾಗ ತುಂಬಾ ನೋವಾಗಿತ್ತು: ಕುಮಾರಸ್ವಾಮಿ