Select Your Language

Notifications

webdunia
webdunia
webdunia
webdunia

ಹಾಯ್ ಸೆಕ್ಸಿ, ಹಲೋ ಸೆಕ್ಸಿ ಎಂದು ಚುಡಾಯಿಸಿದ ಯುವಕರಿಗೆ 6 ತಿಂಗಳು ಜೈಲು

ಹಾಯ್ ಸೆಕ್ಸಿ, ಹಲೋ ಸೆಕ್ಸಿ ಎಂದು ಚುಡಾಯಿಸಿದ ಯುವಕರಿಗೆ 6 ತಿಂಗಳು ಜೈಲು
ಮುಂಬೈ , ಸೋಮವಾರ, 25 ಸೆಪ್ಟಂಬರ್ 2017 (16:33 IST)
ಹಾಯ್ ಸೆಕ್ಸಿ, ಹಲೋ ಸೆಕ್ಸಿ ಎಂದು ಯುವತಿಯರನ್ನು ಚುಡಾಯಿಸಿದ ಇಬ್ಬರು ಯುವಕರಿಗೆ ಕೋರ್ಟ್, 6 ತಿಂಗಳ ಜೈಲುವಾಸ ಮತ್ತು 1 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.
ಯುವತಿಯನ್ನು ಉದ್ದೇಶಪೂರ್ವಕವಾಗಿ ಅಪಮಾನಿಸಲು ಯುವಕರು ಇಂತಹ ಕೃತ್ಯ ಎಸಗಿದ್ದಾರೆ. ಮಹಿಳೆಯರ ವಿರುದ್ಧ ಅಪರಾಧಗಳನ್ನು ತಡೆಗಟ್ಟಲು ಸರಕಾರ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ವಿಶೇಷ ಕೋರ್ಟ್ ಅಭಿಪ್ರಾಯಪಟ್ಟಿದೆ.
 
ಇಬ್ಬರು ಆರೋಪಿಗಳಾದ 24 ವರ್ಷ ವಯಸ್ಸಿನ ಅವಿನಾಶ್ ಭಾವೇಕರ್ ಮತ್ತು ರವಿ ಭಾವೇಕರ್ ವಿರುದ್ಧ ಭಾರತೀಯ ಸಂವಿಧಾನ 24ರ ಕಾಯ್ದೆ ಅನ್ವಯ ಅಪರಾಧಿಗಳು ಎಂದು ಕೋರ್ಟ್ ಪರಿಗಣಿಸಿದೆ.
 
ಪಿಯುಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ರಾತ್ರಿ 8 ಗಂಟೆಗೆ ಮನೆಗೆ ಮರಳುತ್ತಿರುವಾಗ, ಆರೋಪಿ ಯುವಕರು ಹಾಯ್ ಸೆಕ್ಸ್, ಹಲೋ ಸೆಕ್ಸಿ ಎಂದು ಚುಡಾಯಿಸಿದ್ದಾರೆ. ಆರಂಭದಲ್ಲಿ ಯುವಕರ ಹೇಳಿಕೆಗಳನ್ನು ನಿರ್ಲಕ್ಷಿಸಿದ್ದಾಳೆ. ನಂತರ ಸಾರ್ವಜನಿಕವಾಗಿ ಯುವಕರು ಹಾಗೇ ಕರೆಯಲು ಆರಂಭಿಸಿದ್ದರಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.  
 
ಆರೋಪಿಗಳಾದ ಅವಿನಾಶ್ ಭಾವೇಕರ್ ಮತ್ತು ರವಿ ಭಾವೇಕರ್ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ 6 ತಿಂಗಳು ಜೈಲು ಮತ್ತು 1 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈತರು ಡಿಜಿಟಲ್ ಪಾವತಿ ಮಾಡ್ತಾರೆಯೇ?: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ