Select Your Language

Notifications

webdunia
webdunia
webdunia
webdunia

ಆಟದ ಸಮಯ ಕಡಿತಗೊಳಿಸಿದ ಅಜ್ಜಿಯ ವಿರುದ್ಧ ಬಾಲಕನಿಂದ ಪೊಲೀಸರಿಗೆ ದೂರು

ಆಟದ ಸಮಯ ಕಡಿತಗೊಳಿಸಿದ ಅಜ್ಜಿಯ ವಿರುದ್ಧ  ಬಾಲಕನಿಂದ ಪೊಲೀಸರಿಗೆ ದೂರು
ಹೈದ್ರಾಬಾದ್ , ಭಾನುವಾರ, 25 ಡಿಸೆಂಬರ್ 2016 (12:02 IST)
ಚಿಕ್ಕ ಬಾಲಕನೊಬ್ಬ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕಾಗಿದೆ ಎಂದು ಹೇಳಿದಾಗ ಪೊಲೀಸರಿಗೆ ಅಚ್ಚರಿ ಮತ್ತು ಆಘಾತ ಕಾದಿತ್ತು. ಅಜ್ಜಿ ಆಟದ ಸಮಯ ಕಡಿತಗೊಳಿಸಿದ್ದರಿಂದ ಆಕೆಯ ವಿರುದ್ಧ ದೂರು ನೀಡಲು ಬಂದಿದ್ದೇನೆ ಎಂದಾಗ ಪೊಲೀಸರಿಗೆ ಸುಸ್ತೋ ಸುಸ್ತು.
 
ನಗರದ ಎಸ್‌ಆರ್ ನಗರ್ ಪೊಲೀಸ್ ಠಾಣೆಯಲ್ಲಿ ದೈನಂದಿನ ಕರ್ತವ್ಯವನ್ನು ಅಂತ್ಯಗೊಳಿಸಿ ಸ್ವಲ್ಪ ವಿಶ್ರಾಂತಿ ಪಡೆಯಬೇಕು ಎನ್ನುವಾಗಲೇ ಬಾಲಕನ ಪ್ರವೇಶವಾಗಿದೆ. ಬಾಲಕನ ದೂರು ಕೇಳಿದ ನಂತರ ಏನು ಮಾಡಬೇಕು ಎನ್ನುವುದು ತೋಚದೆ ಕಂಗಾಲಾಗಿದ್ದಾರೆ.
 
ಬಾಲಕನ ದೂರು ಕೇಳಿದ ಪೊಲೀಸರು ಆತನ ತಂದೆ ತಾಯಿಗೆ ಕರೆ ಮಾಡಿ ಠಾಣೆಗೆ ಕರೆಸಿಕೊಂಡು ಬುದ್ದಿ ಮಾತು ಹೇಳಿದ್ದಾರೆ.ಟಿವಿ ಸೀರಿಯಲ್‌ಗಳಿಂದ ಪ್ರೇರಣೆಗೊಂಡು ಬಾಲಕ ಪೊಲೀಸ್ ಠಾಣೆಗೆ ಬಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
 
ಪೊಲೀಸ್ ಠಾಣೆಗೆ ಬಂದ ಬಾಲಕನಿಗೆ ಕೆಲ ಚಾಕೋಲೇಟ್‌ಗಳನ್ನು ಕೊಟ್ಟ ನಂತರ ಅಜ್ಜಿಯ ವಿರುದ್ಧದ ದೂರನ್ನು ಬಾಲಕ ಹಿಂಪಡೆದಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉ.ಪ್ರದೇಶದಲ್ಲಿ ಬಿಜೆಪಿಯಿಂದ ಉತ್ತಮ ಅಡಳಿತ: ರಾಜನಾಥ್‌ ಸಿಂಗ್ ಭರವಸೆ