Select Your Language

Notifications

webdunia
webdunia
webdunia
webdunia

ನಿಮಗೆ ಗೊತ್ತೆ..? ಭಾರತದಲ್ಲಿದೆ’ಟ್ರಂಪ್ ಗ್ರಾಮ’

ನಿಮಗೆ ಗೊತ್ತೆ..? ಭಾರತದಲ್ಲಿದೆ’ಟ್ರಂಪ್ ಗ್ರಾಮ’
ಮರೋರಾ , ಶನಿವಾರ, 24 ಜೂನ್ 2017 (11:16 IST)
ನವದೆಹಲಿ: ಭಾರತದ ಹಳ್ಳಿಯೊಂದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರಿಡಲಾಗಿದೆ ಎಂದರೆ ನಂಬುತ್ತೀರಾ..? ನಂಬಲೆಬೇಕು. ಹರಿಯಾಣದ ಮರೋರಾ ಗ್ರಾಮ 'ಟ್ರಂಪ್‌ ಸುಲಭ್‌ ಗ್ರಾಮ' ಎಂದು ಕರೆಯಲ್ಪಡುತ್ತಿದೆ. ಭಾರತದ ಖ್ಯಾತ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ ಹಾಗೂ ಸುಲಭ್‌ ಇಂಟರ್‌ನ್ಯಾಷನಲ್‌ ಎನ್‌‌ಜಿಒನ ಸಂಸ್ಥಾಪಕ ಮುಖ್ಯಸ್ಥ ಬಿಂದೇಶ್ವರ ಪಾಠಕ್ ಅವರು ಈ ಗ್ರಾಮಕ್ಕೆ, 'ಟ್ರಂಪ್‌ ಸುಲಭ್‌ ಗ್ರಾಮ' ಎಂದು ನಾಮಕರಣ ಮಾಡಿದ್ದಾರೆ. 
 
ಭಾರತ ಮತ್ತು ಅಮೆರಿಕಾ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ 'ಭಾರತದ ಹಳ್ಳಿಯೊಂದಕ್ಕೆ 'ಡೊನಾಲ್ಡ್‌ ಟ್ರಂಪ್‌ ಗ್ರಾಮ' ಎಂದು ಹೆಸರಿಡಲು ನಿರ್ಧರಿಸಿದ್ದೇನೆ ಎಂದು ಬಿಂದೇಶ್ವರ ಪಾಠಕ್ ಈ ಹಿಂದೆ ವಾಷಿಂಗ್ಟನ್ ನಲ್ಲಿಉ ನಡೆದ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದರು. ಅಲ್ಲದೇ ರಾಜಸ್ಥಾನದ ಮೆವತ್ ಪ್ರಾಂತ್ಯದ ಗ್ರಾಮಕ್ಕೆ ಟ್ರಂಪ್‌ ಹೆಸರು ಇಡುವುದಾಗಿ ಹೇಳಿದ್ದರು. ಆದರೆ, ರಾಜಸ್ಥಾನ ಸರ್ಕಾರ ಇದನ್ನು ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಈಗ ಹರಿಯಾಣದ ಗ್ರಾಮ ಮರೋರಾಗೆ  ಟ್ರಂಪ್ ಗ್ರಾಮ ಎಂದು ಹೆಸರಿಡಲಾಗಿದೆ.
 
1,800 ಜನ ವಾಸಿರುವ ಈ ಗ್ರಾಮದಲ್ಲಿ 160 ಮನೆಗಳಿದ್ದು ಸದ್ಯ ಕೇವಲ 20 ಶೌಚಾಲಯಗಳಿವೆ. ಶೋಘ್ರದಲ್ಲೇ ಎಲ್ಲಾ ಮನೆಗಳಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕೆಲಸ ಈಗಾಗಲೆ ಆರಂಭವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ಕಾಲುಗಳ ಮಗುವಿಗೆ ಜನ್ಮವಿತ್ತ ಮಹಿಳೆ!