Select Your Language

Notifications

webdunia
webdunia
webdunia
webdunia

ವಾರಾಂತ್ಯದ ರಜೆ ಪಡೆಯಲಿದ್ದಾರೆ ಹರಿಯಾಣಾ ಪೊಲೀಸ್

Haryana police
ಗುರ್ಗಾಂವ್ , ಸೋಮವಾರ, 2 ಮೇ 2016 (12:36 IST)
ಹರಿಯಾಣಾ ಪೊಲೀಸರಿಗೆ ಒಂದು ಒಳ್ಳೆಯ ಸುದ್ದಿ ಇದೆ. ಅವರಿಗೆ ವಾರಾಂತ್ಯದ ರಜೆ ನೀಡಲು ಹೊರಟಿದೆ ರಾಜ್ಯ ಸರ್ಕಾರ. ಸ್ವತಃ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಭಾನುವಾರ್ ಇದನ್ನು ಘೋಷಿಸಿದ್ದಾರೆ. 

ಗುರ್ಗಾಂವ್‌ನಲ್ಲಿ ಪೊಲೀಸ್ ಆಯುಕ್ತರ ಹೊಸ ಕಚೇರಿ ಮತ್ತು ಹರಿಯಾಣಾ ರಾಜ್ಯ ಸೈಬರ್ ಕ್ರೈಮ್ ಬ್ರಾಂಚ್ ಉದ್ಘಾಟಿಸಿ ಮಾತನಾಡುತ್ತಿದ್ದ ಖಟ್ಟರ್,  ಇಲಾಖೆಯ ಬಲವನ್ನು ಸಹ ಹೆಚ್ಚಿಸಲಾಗುತ್ತಿದ್ದು ಆದಷ್ಟು ಬೇಗ 7,200 ಹೊಸ ಸಿಬ್ಬಂದಿ ನೇಮಕ ಮಾಡಲಿದ್ದೇವೆ ಎಂದು ಹೇಳಿದ್ದಾರೆ. 
 
ಪೊಲೀಸ್ ಸಿಬ್ಬಂದಿ 24*7 ಕೆಲಸ ಮಾಡಿ ಪೊಲೀಸ್ ಸಿಬ್ಬಂದಿ ಒತ್ತಡಕ್ಕೊಳಗಾಗಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ವಾರಾಂತ್ಯದ ರಜೆ ನೀಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ. 
 
ಇಲಾಖೆಯಲ್ಲಿ 12,200 ಪೋಸ್ಟ್ ಖಾಲಿ ಇದ್ದು ಇದು ಸಿಬ್ಬಂದಿಗಳಿಗೆ ಹೊರೆ ಎನ್ನಿಸಿದೆ.
 
ಈ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಈ ವರ್ಷ 7,200 ಸಿಬ್ಬಂದಿ ಆಯ್ಕೆ ಮಾಡುತ್ತಿದ್ದು 50 ವರ್ಷದೊಳಗಿನ ನಿವೃತ್ತ ಸೈನಿಕರನ್ನು ವಿಶೇಷ ಪೊಲೀಸ್ ಅಧಿಕಾರಿಯಾಗಿ ಸಹ ಸೇವೆಗೆ ತೆಗೆದುಕೊಳ್ಳಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

4 ಟಿಎಂಸಿ ಕಾರ್ಯಕರ್ತರ ಸಾವು; ಬಾಂಬ್ ದಾಳಿ ನಡೆಸಿತೇ ಕಾಂಗ್ರೆಸ್?