Webdunia - Bharat's app for daily news and videos

Install App

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

Sampriya
ಸೋಮವಾರ, 16 ಜೂನ್ 2025 (17:22 IST)
ಸೋನಿಪತ್: ಹರಿಯಾಣದ ಸೋನಿಪತ್‌ನಲ್ಲಿ ಯುವ ಮಾಡೆಲ್‌ನ ದೇಹವನ್ನು ಗಂಟಲು ಸೀಳಿಹತ್ಯೆ ಮಾಡಿ, ನಂತರ ಕಾಲುವೆಗೆ ಎಸೆದು ಹೋಗಿರುವ ಘಟನೆ ಸೋಮವಾರ ವರದಿಯಾಗಿದೆ. 

ಹತ್ಯೆಯಾದವಳನ್ನು ಶೀತಲ್ ಹರ್ಯಾನ್ವಿ ಎಂದು ಗುರುತಿಸಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಆಕೆ ಗುರುತಿಸಿಕೊಂಡಿದ್ದಳು. 

ಶೀತಲ್ ತನ್ನ ಸಹೋದರಿ ನೇಹಾ ಜೊತೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 14 ರಂದು ಶೀತಲ್‌ ಅಹರ್ ಗ್ರಾಮದಲ್ಲಿ ಚಿತ್ರೀಕರಣಕ್ಕೆ ತೆರಳಿದ್ದರು. ಸಂತ್ರಸ್ತೆಯ ಸಹೋದರಿ ನೀಡಿದ ದೂರಿನ ಪ್ರಕಾರ, ಶೀತಲ್ ತನ್ನ ಮಾಜಿ ಗೆಳೆಯ ಸುನೀಲ್ ತನ್ನನ್ನು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದ್ದಳು. 

ಹೀಗೇ ಹೇಳಿದ್ಮೇಲೆ ಸ್ವಲ್ಪ ಸಮಯದ ನಂತರ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಸಂಬಂಧ  ಓಲ್ಡ್ ಇಂಡಸ್ಟ್ರಿಯಲ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದವರ ದೂರನ್ನು ದಾಖಲಿಸಿದರು.

ತನಿಖೆಯ ನಂತರ, ಪೊಲೀಸರು ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ. 

ಆರು ತಿಂಗಳ ಹಿಂದೆ ಕರ್ನಾಲ್‌ನ ಮಾಡೆಲ್ ಟೌನ್‌ನಲ್ಲಿರುವ ಸುಕುನ್ ಎಂಬ ತನ್ನ ಹೋಟೆಲ್‌ನಲ್ಲಿ ತಂಗಿದ್ದ ಶೀತಲ್‌ನೊಂದಿಗೆ ಸುನೀಲ್ ಸ್ನೇಹ ಬೆಳೆಸಿದ ಎಂದು ಸಂತ್ರಸ್ತೆಯ ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ. 

ಇಬ್ಬರೂ ಹತ್ತಿರವಾದರು ಮತ್ತು ಕೆಲವೇ ತಿಂಗಳುಗಳಲ್ಲಿ ಸುನೀಲ್ ಸಂತ್ರಸ್ತೆಯನ್ನು ಮದುವೆಯಾಗುವಂತೆ ಕೇಳಿಕೊಂಡನು. ಆದರೆ, ಆತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಬಿಜೆಪಿ ಗೂಂಡಾಗಳೇ ಕಾರಣ: ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್

Viral Video, ಬೆಂಗಳೂರು ಮಹಿಳೆಗೆ ಕಪಾಳಮೋಕ್ಷ ಮಾಡಿದ ರಾಪಿಡೋ ಚಾಲಕ: ಕಾರಣ ಇಲ್ಲಿದೆ

ದೆಹಲಿಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಹಾಂಗ್‌ಕಾಂಗ್‌ನಲ್ಲಿ ಲ್ಯಾಂಡಿಂಗ್‌

ರಾಜ ರಘುವಂಶಿ ಹತ್ಯೆಯಾಗುವ ಮುನ್ನ ಪತ್ನಿ ಸೋನಂ ಜೊತೆಗಿದ್ದ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments