Publish Date: Sat, 30 Dec 2017 (14:55 IST)
Updated Date: Sat, 30 Dec 2017 (14:57 IST)
ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ತಮ್ಮೊಡನೆ ಕೈ ಜೋಡಿಸುವಂತೆ ಪಾಟಿದರ್ ಹೋರಾಟಗಾರ ಹಾರ್ದಿಕ್ ಪಟೇಲ್ ಆಹ್ವಾನ ನೀಡಿದ್ದಾರೆ.
ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಅಸಮಾಧಾನಗೊಂಡಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಗುಜರಾತ್‌ನಲ್ಲಿ ಈ ಬೆಳವಣಿಗೆ ನಡೆದಿದೆ.
ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಪಕ್ಷಕ್ಕಾಗಿ ಬಹಳಷ್ಟು ದುಡಿದಿರುವ ಹಿರಿಯ ನಾಯಕನಿಗೆ ಬಿಜೆಪಿ ಗೌರವ ನೀಡುತ್ತಿಲ್ಲ, ಅವರು ನಮ್ಮ ಜತೆ ಸೇರಲಿ, ಎಲ್ಲರೂ ಅವರ ಜತೆ ನಿಲ್ಲಬೇಕಿದೆ ಎಂದು ಹೇಳಿದ್ದಾರೆ.
ನಿತಿನ್ ಪಟೇಲ್ ಅವರು ಗುಜರಾತ್ ಸರ್ಕಾರದಲ್ಲಿ ಪ್ರಮುಖ ಖಾತೆಗಳು ಕೈ ತಪ್ಪಿ ಹೋಗಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.