Select Your Language

Notifications

webdunia
webdunia
webdunia
webdunia

ಮಿಥಾಲಿ ನಿವೃತ್ತಿ ಬೆನ್ನಲ್ಲೇ ಏಕದಿನ, ಟಿ-20ಗೆ ಹರ್ಮನ್ ಪ್ರೀತ್ ನಾಯಕಿಯಾಗಿ ಆಯ್ಕೆ!

Harmanpreet India women ODI captain Mithali raj ಮಿಥಾಲಿ ರಾಜ್ ಹರ್ಮಪ್ರೀತ್ ಕೌರ್ ಏಕದಿನ
bengaluru , ಬುಧವಾರ, 8 ಜೂನ್ 2022 (21:43 IST)
ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬೆನ್ನಲ್ಲೇ ಹರ್ಮನ್ ಪ್ರೀತ್ ಕೌರ್ ಅವರನ್ನು ಭಾರತ ವನಿತಾ ತಂಡದ ಸೀಮಿತ ಓವರ್ ಗಳ ಪಂದ್ಯಗಳಿಗೆ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.
ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ವನಿತೆಯರ ಏಕದಿನ ಮತ್ತು ಟಿ-20 ತಂಡವನ್ನು ಪ್ರಕಟಿಸಲಾಗಿದ್ದು, ಹರ್ಮನ್ ಪ್ರೀತ್ ಕೌರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದ್ದು, ಸ್ಮೃತಿ ಮಂದಾನ ಅವರನ್ನು ಉಪನಾಯಕಿಯಾಗಿ ಆಯ್ಕೆ ಮಾಡಲಾಗಿದೆ.
ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಜೂನ್ 13ರಿಂದ ಮೂರು ಟಿ-20 ಸರಣಿ ಆಡಲಿದ್ದು, ನಂತರ 3 ಏಕದಿನ ಪಂದ್ಯಗಳನ್ನು ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡಿಟ್ಟು ಹೊಡೆಯುವ ಹೇಳಿಕೆಗೆ ಈಗಲೂ ಬದ್ಧ: ಮುತಾಲಿಕ್