ಗುಜರಾತ್ ರಾಜ್ಯದಿಂದ ಆರು ತಿಂಗಳವರೆಗೆ ಹೊರಗಿರಬೇಕು ಎನ್ನುವ ಕೋರ್ಟ್ ಷರತ್ತಿನ ಅನ್ವಯ ಇಂದು ಪಟೇಲ್ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ರಾಜಸ್ಥಾನದ ಉದಯಪುರ್‌ಗೆ ತೆರೆಳಿದ್ದಾರೆ.
22 ವರ್ಷ ವಯಸ್ಸಿನ ಹಾರ್ದಿಕ್, ಉದಯಪುರದಲ್ಲಿ ಮಾಜಿ ಕಾಂಗ್ರೆಸ್ ಶಾಸಕ ಮತ್ತು ಸ್ಥಳೀಯ ಮುಖಂಡ ಪುಷ್ಕರ್‌ತಾಲ್ ಪಟೇಲ್ ಅವರ ನಿವಾಸದಲ್ಲಿ ಆರು ತಿಂಗಳುಗಳವರೆಗೆ ವಾಸವಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್ ಪಟೇಲ್ ಮತ್ತು ಅವರ ಆತ್ಮಿಯ ದಿನೇಶ್ ಬಂಭಾನಿಯಾ ಇಂದು ಬೆಳಿಗ್ಗೆ 7.30 ಗಂಟೆಗೆ ತಮ್ಮ ಸ್ವಗ್ರಾಮವಾದ ವೀರಮಗಮ್‌ನಿಂದ ರಾಜಸ್ಥಾನಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್ ಪಟೇಲ್ ಗುಜರಾತ್‌ನ ಇತರ ಜಿಲ್ಲೆಗಳಿಗೆ ಭೇಟಿ ಮಾಡಬೇಕು ಎಂದು ಬಯಸಿದ್ದರೂ ಸಮಯದ ಕೊರತೆಯಿಂದಾಗಿ ನೇರವಾಗಿ ಉದಯಪುರಕ್ಕೆ ತೆರಳಿದರು ಎಂದು ಬಂಭಾನಿಯಾ ತಿಳಿಸಿದ್ದಾರೆ.
ವೀಸನಗರ್‌ನಲ್ಲಿ ಬಿಜೆಪಿ ಶಾಸಕನ ಕಚೇರಿ ಧ್ವಂಸ ಮತ್ತು ದೇಶದ್ರೋಹ ಪ್ರಕರಣಗಳಲ್ಲಿ ಹಾರ್ದಿಕ್‌ಗೆ ಕೋರ್ಟ್ ಷರತ್ತಿನ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಹೈಕೋರ್ಟ್ ನಿರ್ದೇಶನದಂತೆ ಜೈಲಿನಿಂದ ಬಿಡುಗಡೆಯಾದ 48 ಗಂಟೆಯೊಳಗಾಗಿ ಹಾರ್ದಿಕ್ ಗುಜರಾತ್ ರಾಜ್ಯವನ್ನು ತೊರೆಯಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.