ಹರ್ಯಾಣದ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ದರೋಡೆ ನಡೆದಿದೆ. ಸುಮಾರು 10 ಕೋಟಿ ರೂ. ಮೌಲ್ಯದ 33 ಕೆ.ಜಿ ಬಂಗಾರ ದೋಚಲಾಗಿದೆ.
ನಿನ್ನೆ ರಾತ್ರಿ ಕಚೇರಿಗೆ ನುಗ್ಗಿದ 7ರಿಂದ 8ಮಂದಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ಕಳೆದ 6 ತಿಂಗಳಲ್ಲಿ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ನಡೆದ 6ನೇ ದರೋಡೆ ಇದಾಗಿದೆ. ಮುಂಬೈ ಮತ್ತು ದೆಹಲಿ ಸುತ್ತಮುತ್ತ ಮಣಪ್ಪುರಂ ಕಚೇರಿಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದೇಶದ 25 ನಗರಗಳಲ್ಲಿ ಮಣಪ್ಪುರಂ ಫೈನಾನ್ಸ್ 3500 ಶಾಕಾ ಕಚೇರಿಗಳನ್ನ ಹೊಂದಿದೆ. ಜನವರಿಯಲ್ಲಿ ಛತ್ತೀಸ್ ಗಢ ಮತ್ತು ಕಳೆದ ವರ್ಷ ಕೋಲ್ಕತ್ತಾ, ನಾಗ್ಪುರ್, ಜಲಂದರ್ ಸೇರಿ 6 ಶಾಖಾ ಕಚೇರಿಗಳಲ್ಲಿ ಲೂಟಿ ನಡೆದಿತ್ತು. 40 ಕೋಟಿ ಮೌಲ್ಯದ 150 ಕೆಜಿ ಬಂಗಾರ ದೋಚಲಾಗಿತ್ತು.