Webdunia - Bharat's app for daily news and videos

Install App

ಎಎಪಿ ಸಹೋದ್ಯೋಗಿಗಳು ಜೈಲಿಗೆ ಹೋಗಿದ್ದಕ್ಕೆ ವಿಷಾದಿಸಿದ ಅಣ್ಣಾ ಹಜಾರೆ

Webdunia
ಮಂಗಳವಾರ, 6 ಸೆಪ್ಟಂಬರ್ 2016 (11:26 IST)
ಅರವಿಂದ್ ಕೇಜ್ರಿವಾಲ್ ಅವರ ಕೆಲವು ಸಹೋದ್ಯೋಗಿಗಳು ಜೈಲಿಗೆ ಹೋಗಿದ್ದನ್ನು, ಇನ್ನೂ ಕೆಲವರು ವಂಚನೆಯಲ್ಲಿ ತೊಡಗಿದ್ದನ್ನು ನೋಡಿ ತನಗೆ ತುಂಬಾ ವಿಷಾದವೆನಿಸುತ್ತದೆ ಎಂದು  ಹೆಸರಾಂತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಂಗಳವಾರ ತಿಳಿಸಿದ್ದು, ಹಜಾರೆ ಅವರ ಹೇಳಿಕೆಯಿಂದ ಕೇಜ್ರಿವಾಲ್ ಅವರನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿದೆ.
 
ನನಗೆ ತುಂಬಾ ನೋವಾಗಿದೆ. ಅವರು ನನ್ನ ಜತೆ ಇದ್ದಾಗ ಗ್ರಾಮ್ ಸ್ವರಾಜ್ ಕುರಿತು ಪುಸ್ತಕ ಬರೆದಿದ್ದರು. ಇದನ್ನು ಗ್ರಾಮ್ ಸ್ವರಾಜ್ ಎಂದು ನಾವು ಕರೆಯುತ್ತೇವೆಯೇ ಎಂದು ಹಜಾರೆ ಪ್ರಶ್ನಿಸಿದರು. ಆದ್ದರಿಂದಲೇ ನನಗೆ ದುಃಖವಾಗಿದೆ. ಅವರ ಕಡೆ ಆಶಾಭಾವನೆಯಿಂದ ನೋಡುವುದು ಮುಗಿದಿದೆ ಎಂದು ಹಜಾರೆ ಹೇಳಿದರು.
 
ಮಹಿಳೆಯೊಬ್ಬರಿಂದ ರೇಪ್ ಆರೋಪಕ್ಕೆ ಗುರಿಯಾದ ಎಎಪಿ ಶಾಸಕ ಸಂದೀಪ್‌ಕುಮಾರ್‌ನನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.
 
ತಾವು ಮುಂಚೆ ಕೇಜ್ರಿವಾಲ್ ಅವರಿಗೆ, ನೀವು ಪಕ್ಷಕ್ಕೆ ಚಾಲನೆ ನೀಡಿದ ಬಳಿಕ ಜಗತ್ತನ್ನು ಸುತ್ತುತ್ತೀರಿ,  ಪಕ್ಷಕ್ಕಾಗಿ ರಾಲಿಗಳನ್ನು ದೇಶದಲ್ಲಿ ಆಯೋಜಿಸುತ್ತೀರಿ, ಆದರೆ ನಿಮ್ಮ ಪಕ್ಷವನ್ನು ಸೇರಿದ ಜನರಲ್ಲಿ ಉತ್ತಮ ಗುಣನಡತೆ ಇದೆಯೋ ಇಲ್ಲವೋ ಎಂದು ಹೇಗೆ ಪತ್ತೆಹಚ್ಚುತ್ತೀರಿ ಎಂದು ಕೇಳಿದ್ದಾಗಿ ಹೇಳಿದರು. 
 
 ಅದಕ್ಕೆ ಕೇಜ್ರಿವಾಲ್ ಅವರಲ್ಲಿ ಉತ್ತರವಿರಲಿಲ್ಲ ಎಂದು ಹಜಾರೆ ನುಡಿದರು. ಅದು ಈಗ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಮುಂಚೆ ಕೂಡ ನಾನು ಹೇಳಿದ್ದೆ. ಪಕ್ಷದ ನಾಯಕರಾಗಿ ನಿಮ್ಮ ಪಕ್ಷವನ್ನು ಸೇರುವವರು ಶುದ್ಧ ಚಾರಿತ್ರ್ಯ ಹೊಂದಿದ್ದಾರೋ ಇಲ್ಲವೋ ಪರೀಕ್ಷಿಸುವುದು ಅಗತ್ಯ ಎಂದು ಹಜಾರೆ ನುಡಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments