Webdunia - Bharat's app for daily news and videos

Install App

ಕ್ಯಾಮರಾದಲ್ಲಿ ಸೆರೆ: ಶ್ರೀಲಂಕಾ ರಾಯಭಾರಿಗೆ ಒದೆತ, ಮುಷ್ಠಿಪ್ರಹಾರ

Webdunia
ಮಂಗಳವಾರ, 6 ಸೆಪ್ಟಂಬರ್ 2016 (10:09 IST)
ಕೌಲಾಲಂಪುರ, ಮಲೇಶಿಯಾ:  ಕೌಲಾಲಂಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಶ್ರೀಲಂಕಾ ರಾಯಭಾರಿಯ ಮೇಲೆ ಪ್ರತಿಭಟನೆಕಾರರ ಐವರ ಗುಂಪು ಅಮಾನೀಯವಾಗಿ ಹಲ್ಲೆ ಮಾಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಲೇಶಿಯಾ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಹೈಕಮೀಷನರ್( ರಾಯಭಾರಿ) ಇಬ್ರಾಹಿಂ ಸಾಹಿಬ್ ಅನ್ಸಾರ್ ಮೇಲೆ ದಾಳಿಯಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಲೇಶಿಯಾದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ದಾಳಿಕೋರರ ಗುರುತುಗಳನ್ನು ಅಥವಾ ಹಿನ್ನೆಲೆಯ ಬಗ್ಗೆ ವಿವರಗಳನ್ನು ಅವರು ಇದುವರೆಗೆ ನೀಡಿಲ್ಲ.
 
ಈ ಘಟನೆಯ ಬಳಿಕ ಕೊಲಂಬೊದಲ್ಲಿ ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಎಸಾಲಾ ವೀರಾಕೂನ್ ಮಲೇಶಿಯಾದ ಉನ್ನತ ರಾಯಭಾರಿ ವಾನ್ ಜೈದಿ ವಾನ್ ಅಬ್ದುಲ್ಲಾ ಅವರನ್ನು ಕರೆಸಿಕೊಂಡು ಕೊಲಂಬೊದ ರಾಜತಾಂತ್ರಿಕ ನಿಯೋಗಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದರು. ಸಂಭವನೀಯ ಅಪಾಯದ ಬಗ್ಗೆ ಎಚ್ಚರಿಕೆಗಳನ್ನು ನೀಡಿದ್ದರೂ ಮಲೇಶಿಯಾ ಅಧಿಕಾರಿಗಳು ಅಗತ್ಯ ರಕ್ಷಣೆ ನೀಡುವಲ್ಲಿ ವಿಫಲವಾದ ಬಗ್ಗೆ ವಿದೇಶಾಂಗ ಸಚಿವಾಲಯವು ನಿರಾಶೆ ವ್ಯಕ್ತಪಡಿಸಿದೆ.
 
ಸುಮಾರು 100 ಜನಾಂಗೀಯ ಪ್ರತಿಭಟನೆಕಾರರು ಕಳೆದ ವಾರ ಕೌಲಾಲಂಪುರದಲ್ಲಿ ಸೇರಿ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ವಿರುದ್ಧ ರಾಲಿ  ನಡೆಸಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments