Select Your Language

Notifications

webdunia
webdunia
webdunia
webdunia

ಅಹ್ಮದ್ ಪಟೇಲ್`ಗೆ ಇಂದು ಅಗ್ನಿ ಪರೀಕ್ಷೆ: ಸಫಲವಾಗುತ್ತಾ ಡಿಕೆಶಿ ಶ್ರಮ..?

ಅಹ್ಮದ್ ಪಟೇಲ್`ಗೆ ಇಂದು ಅಗ್ನಿ ಪರೀಕ್ಷೆ: ಸಫಲವಾಗುತ್ತಾ ಡಿಕೆಶಿ ಶ್ರಮ..?
ಗಾಂಧಿನಗರ , ಮಂಗಳವಾರ, 8 ಆಗಸ್ಟ್ 2017 (09:20 IST)
ಗುಜರಾತ್`ನಲ್ಲಿಂದು 3 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕಳೆದ 20 ದಿನಗಳಿಂದ ನಡೆದ ರಾಜಕೀಯ ಮೇಲಾಟಗಳಿಗೆ ತೆರೆ ಬೀಳಲಿದೆ. ಕಾಂಗ್ರೆಸ್ ಅಭ್ಯರ್ಥಿ ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್`ಗೆ ಅಗ್ನಿ ಪರೀಕ್ಷೆಯಾಗಿದೆ.

ಎರಡು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಖಚಿತವಾಗಿದ್ದು, 3ನೇ ಸ್ಥಾನಕ್ಕೆ ಕಾಂಗ್ರೆಸ್ ಜೊತೆ ಪೈಪೋಟೆ ಏರ್ಪಟ್ಟಿದೆ. ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು 45 ಮತಗಳು ಬೇಕು. 121 ಶಾಸಕರನ್ನ ಹೊಂದಿರುವ ಬಿಜೆಪಿ ಎರಡು ಸ್ಥಾನಗಳನ್ನ ನಿರಾಯಾಸವಾಗಿ ಗೆಲ್ಲಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಸಚಿವೆ ಸ್ಮೃತಿ ಇರಾನಿ ಗೆಲುವು ಖಚಿತವಾಗಿದೆ. ಬಿಜೆಪಿಯಲ್ಲಿ 31 ಮತಗಳು ಉಳಿಯಲಿದ್ದು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಬಲವಂತಸಿಂಗ ರಜಪೂತ್ 3ನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್`ನ ಅಹ್ಮದ್ ಪಟೇಲ್`ಗೆ ಸವಾಲು ಒಡ್ಡಿದ್ದಾರೆ.  ಬಲವಂತಸಿಂಗ ಗೆಲುವಿಗೆ ಇನ್ನೂ 14 ಮತಗಳ ಅವಶ್ಯಕತೆ ಇದ್ದು, ಕಾಂಗ್ರೆಸ್ ಶಾಸಕರನ್ನ ಸೆಳೆಯಲು ಯತ್ನಿಸಿತ್ತು. ಹೀಗಾಗಿಯೇ, ಕಾಂಗ್ರೆಸ್`ನ 44 ಶಾಸಕರು ಕರ್ನಾಟಕಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ಇತ್ತ, ಕಾಂಗ್ರೆಸ್`ನಲ್ಲಿದ್ದ 57 ಶಾಸಕರ ಪೈಕಿ 6 ಮಮಂದಿ ರಾಜೀನಾಮೆ ಕೊಟ್ಟು ಕೆಲವರು ಬಿಜೆಪಿ ಸೇರಿದ್ದಾರೆ. ಉಳಿದ 51 ಶಾಸಕರ ಪೈಕಿ 7 ಮಂದಿ ಅಸಮಾಧಾನದಲ್ಲಿದ್ದಾರೆ. ಹೀಗಾಗಿ, ಕಾಂಗ್ರೆಸ್ ಸಾಸಕರ ಬಲ 44ಕ್ಕೆ ಕುಸಿದಿದ್ದು, ಅಹ್ಮದ್ ಪಟೇಲ್ ಗೆಲ್ಲಲಿ ಇನ್ನೂ ಒಂದು ಸ್ಥಾನದ ಅವಶ್ಯಕತೆ ಇದೆ. ಎಸ್`ಸಿಪಿ, ಜೆಡಿಯುನಿಂದ ಮತ ಸಿಗುವ ಆಶಯದಲ್ಲಿ ಕಾಂಗ್ರೆಸ್ ಇದೆ. ತಮ್ಮ ಗೆಲುವು ನಿರಾಯಾಸ ಎಂದು ಅಹ್ಮದ್ ಪಟೇಲ್ ಹೇಳಿಕೊಂಡಿದ್ದಾರೆ. ಆದರೆ, ಅಡ್ಡ ಮತದಾನದ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಶಾಸಕರು ನೋಟಾ ಬಳಸಿದರೂ ಅಹ್ಮದ್ ಪಟೇಲ್ ಗೆಲುವು ಕಷ್ಟವಾಗಲಿದೆ. ಈ ಎಲ್ಲ ಕುತೂಹಲಗಳಿಗೆ ಸಂಜೆ ತೆರೆಬೀಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಸಿನಿಮಾ ನೋಡ್ತಿದ್ದೇನೆ ಕಾಪಾಡಿ ಎಂದು ಸಚಿವೆ ಸುಷ್ಮಾಗೆ ಟ್ವೀಟ್ ಮಾಡಿದ ಭೂಪ