Select Your Language

Notifications

webdunia
webdunia
webdunia
webdunia

`ಕೈ’ ಬಿಟ್ಟ ವಾಘೇಲಾ: ಗುಜರಾತ್ ಕಾಂಗ್ರೆಸ್ ಭಿನ್ನಮತ ಸ್ಫೋಟ

`ಕೈ’ ಬಿಟ್ಟ ವಾಘೇಲಾ: ಗುಜರಾತ್ ಕಾಂಗ್ರೆಸ್ ಭಿನ್ನಮತ ಸ್ಫೋಟ
ಗಾಂಧಿನಗರ , ಶುಕ್ರವಾರ, 21 ಜುಲೈ 2017 (16:33 IST)
ಚುನಾವಣಾ ವರ್ಷದಲ್ಲಿ ಗುಜರಾತ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಿಪಕ್ಷ ನಾಯಕ ಶಂಕರ್ ಸಿಂಗ್ ವಘೇಲಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ 77ನೇ ಹುಟ್ಟುಹಬ್ಬ ಆಚರಿಸಿಕೊಂಡ ವಾಘೇಲಾ ಗಾಂಧಿನಗರದಲ್ಲಿ ಬಹಿರಂಗ ಸಮಾವೇಶ ನಡೆಸಿ ಪಕ್ಷ ಬಿಡುತ್ತಿರುವುದನ್ನ ಘೋಷಿಸಿದ್ಧಾರೆ. 24 ಗಂಟೆಗಳ ಮುನ್ನವೇ ನನ್ನನ್ನ ಪಕ್ಷದಿಂದ ಹೊರ ಹಾಕಲಾಗಿದೆ ಎಂದು ಆರೋಪಿಸಿದ ವಾಘೇಲಾ, ನಾನೇ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದ್ದಾರೆ. ನಾನು ಯಾವ ಪಕ್ಷಕ್ಕೂ ಸೇರುವುದಿಲ್ಲ ನಾನೀಗ ಸ್ವತಂತ್ರ ಎಂದು ಘೋಷಿಸಿದ್ದಾರೆ.

ಕಳೆದ ವಿದಾನಸಭೆಯಲ್ಲಿ ಪಕ್ಷದ ಗೆಲುವಿಗೆ ಸರಿಯಾಗಿ ಯೋಜನೆ ರೂಪಿಸಲಿಲ್ಲ ಎಂದು ಆರೋಪಿಸಿದ್ದ ವಾಘೇಲಾ, ಸೋನಿಯಾ-ರಾಹುಲ್ ಗಾಂಧಿ ನಾಯಕತ್ವವನ್ನೇ ಪ್ರಶ್ನಿಸಿದ್ದರು. ಇತ್ತೀಚೆಗೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ವಾಘೇಲಾ ಜೊತೆ ಗುರುತಿಸಿಕೊಂಡಿರುವ 8 ಶಾಸಕರು ಎನ್`ಡಿಎ ಅಭ್ಯರ್ಥಿ ಕೋವಿಂದ್`ಗೆ ಅಡ್ಡ ಮತದಾನ ಮಾಡಿದ್ದರು ಎಂಬ ಆರೋಪವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ 7 ಗಂಟೆಗಳ ಕಾಲ ಗಿಟಾರ್‍ ನುಡಿಸುತ್ತಲೇ ಇದ್ದ ವ್ಯಕ್ತಿ...