Select Your Language

Notifications

webdunia
webdunia
webdunia
webdunia

ಗುಜರಾತ್ ಗೃಹಸಚಿವರಿಗೆ ಶೂ ಹೊಡೆತ ನೀಡಿದ ಯುವಕ

ಗುಜರಾತ್ ಗೃಹಸಚಿವರಿಗೆ ಶೂ ಹೊಡೆತ ನೀಡಿದ ಯುವಕ
ವಡೋದರಾ , ಗುರುವಾರ, 2 ಮಾರ್ಚ್ 2017 (16:34 IST)
ಗುಜರಾತ್ ಗೃಹಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರ ಮೇಲೆ ಯುವಕನೊಬ್ಬ ಶೂ ಎಸೆದ ಹೇಯ ಘಟನೆ ವರದಿಯಾಗಿದೆ.
ಗುಜರಾತ್ ವಿಧಾನಸಭೆಯ ಪ್ರವೇಶ ದ್ವಾರದ ಬಳಿ ನಡೆದ ಘಟನೆ ನಡೆದಿದ್ದು, ಸಚಿವ ಪ್ರದೀಪ್ ಸಿನ್ಹಾ ದ್ವಾರದ ಬಳಿ ಆಗಮಿಸುತ್ತಿದ್ದಂತೆ ಗೋಪಾಲ ಭಾಯಿ ಇಟಾಲಿಯಾ ಎನ್ನುವ ವ್ಯಕ್ತಿ ಶೂ ಎಸೆದಿದ್ದಾನೆ.
 
ಸರಕಾರಿ ಉದ್ಯೋಗಿಯಾಗಿರುವ ಗೋಪಾಲ ಭಾಯಿ ಇಟಾಲಿಯಾ ಎನ್ನುವ ವ್ಯಕ್ತಿ ಇಂತಹ ಕೃತ್ಯವೆಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಯುವಕನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು: ಕೆ. ಜೆ. ಜಾರ್ಜ್