Select Your Language

Notifications

webdunia
webdunia
webdunia
webdunia

ರಾಜ್ಯಸಭೆ ಚುನಾವಣೆ: ಗುಜರಾತ್‌ನಲ್ಲಿ ಮತದಾನ ಅಂತ್ಯ

ರಾಜ್ಯಸಭೆ ಚುನಾವಣೆ: ಗುಜರಾತ್‌ನಲ್ಲಿ ಮತದಾನ ಅಂತ್ಯ
ಗಾಂಧಿನಗರ , ಮಂಗಳವಾರ, 8 ಆಗಸ್ಟ್ 2017 (14:47 IST)
ಗುಜರಾತ್‌ನಲ್ಲಿ ಮೂರು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯ ಮತದಾನ ಅಂತ್ಯವಾಗಿದೆ.
 
ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ಭಾರಿ ಹಣಾಹಣಿ ಏರ್ಪಟ್ಟಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆಯ ನಂತರ ಫಲಿತಾಂಶ ಹೊರ ಬೀಳಲಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆಲುವು ಬಹತೇಕ ನಿಷ್ಚಿತ ಎನ್ನಲಾಗುತ್ತಿದೆ.
 
ಮೂರನೇ ಸ್ಥಾನಕ್ಕೆ ಬಿಜೆಪಿಯ ಬಲವಂತಸಿಂಗ್ ರಾಜಪೂತ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ.
 
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಹ್ಮದ್ ಪಟೇಲ್‌ರನ್ನು ಸೋಲಿಸುವುದಾಗಿಯೇ ಪಣ ತೊಟ್ಟಿದ್ದು, ಚುನಾವಣೆಯಲ್ಲಿ ಭಾರಿ ರಣತಂತ್ರ ಹೆಣೆದಿದ್ದರು. ಅಹ್ಮದ್ ಪಟೇಲ್‌ ಗೆಲುವಿಗಾಗಿ 45 ಮತಗಳು ಬೇಕಾಗಿದ್ದು, 44 ಕಾಂಗ್ರೆಸ್ ಶಾಸಕರು, 2 ಎನ್‌ಸಿಪಿ ಪಕ್ಷದ ಶಾಸಕರು ಪಟೇಲ್ ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ.
 
ಚುನಾವಣೆ ಫಲಿತಾಂಶ ಬಂದ ನಂತರವಷ್ಟೆ ಶಾಸಕರು ಅಡ್ಡಮತದಾನ ಮಾಡಿದ್ದಾರೆಯೇ ಎನ್ನುವುದು ಬಹಿರಂಗವಾಗಲಿದೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಕಲಿಯದಿದ್ರೆ ವಜಾ: ಬ್ಯಾಂಕ್‌ ಸಿಬ್ಬಂದಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರ ಎಚ್ಚರಿಕೆ