Select Your Language

Notifications

webdunia
webdunia
webdunia
webdunia

ಗೋಮಾಂಸ ಹೊಂದಿದ ವ್ಯಕ್ತಿಗೆ 3 ವರ್ಷಗಳ ಜೈಲುಶಿಕ್ಷೆ

gujarat lions
ಸೂರತ್ , ಸೋಮವಾರ, 9 ಮೇ 2016 (13:43 IST)
ನವಸಾರಿ ಜಿಲ್ಲೆಯ ಗಾಂಡೇವಿ ತಾಲೂಕಿನ ಸ್ಥಳೀಯ ಕೋರ್ಟ್ ಗೋಮಾಂಸವನ್ನು ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ರಫೀಕ್ ಇಲ್ಯಾಸ್‌ಬಾಯ್ ಖಲೀಫಾ(35)ನಿಗೆ ಗುಜರಾತ್ ಪ್ರಾಣಿ ಸುರಕ್ಷತಾ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಮೂರು ವರ್ಷಗಳ ಜೈಲು ಮತ್ತು 10,000 ರೂ. ದಂಡವನ್ನು ವಿಧಿಸಲಾಗಿದೆ. ಗುಜರಾತಿನಲ್ಲಿ ಗೋವು ಅಥವಾ ಗೋವಿನ ಉತ್ಪನ್ನಗಳನ್ನು ಹೊಂದುವುದು, ಖರೀದಿಸುವುದು ಮತ್ತು ಮಾರಾಟ ಮಾಡುವುದಕ್ಕೆ ನಿಷೇಧಿಸಲಾಗಿದೆ.
 
ಆರೋಪಿಯು 40 ಕೆಜಿ ಗೋಮಾಂಸವನ್ನು ಇಟ್ಟುಕೊಂಡಿರುವುದು ಅವನಿಗೆ ಮತ್ತು ಪಂಚಾಯಿತಿ ಸದಸ್ಯರಿಗೆ ನಡೆಸಿದ ಪಾಟೀ ಸವಾಲಿನಲ್ಲಿ ಸಾಬೀತಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ದನವು ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಸಂಬಂಧಿಸಿದೆ. ಆದ್ದರಿಂದ ಇಂತಹ ಅಪರಾಧ ಎಸಗುವುದು ಸಮಾಜದ ಶಾಂತಿ ಕದಡುತ್ತದೆ. ಆರೋಪಿಯನ್ನು ಜೈಲಿಗೆ ಹಾಕಿದರೆ ಉಳಿದವರು ಇಂತಹ ಅಪರಾಧ ಎಸಗುವುದಕ್ಕೆ ಹಿಂಜರಿಯುತ್ತಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ವೈ-ಫೈ ಡೇಟಾ ಕಳುವಾಗುತ್ತಿದೆಯೇ? ಪತ್ತೆ ಹಚ್ಚಲು ಹೀಗೆ ಮಾಡಿ