Publish Date: Thu, 30 Jun 2022 (14:17 IST)
Updated Date: Thu, 30 Jun 2022 (13:12 IST)
ನವದೆಹಲಿ : ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.
ನನ್ನ ಪ್ರಕಾರ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡೋದು ಗ್ಯಾರಂಟಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾವು 150 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಮುಖ್ಯಮಂತ್ರಿಗಳ ಅಭಿಪ್ರಾಯ ಬೇರೆ, ಜನರ ಅಭಿಪ್ರಾಯ ಬೇರೆ.
ಸಮೀಕ್ಷೆಯಲ್ಲಿ ಜನರು ಹೇಳಿದ್ದನ್ನೇ ಹೇಳ್ತಾರೆ. ಆದರೆ ಸಿಎಂ ಜನರ ಅಭಿಪ್ರಾಯ ಒಪ್ಪಲ್ಲ. ಈ ಬಾರಿ ಉತ್ತಮ ನಂಬರ್ಗಳೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತೆ ಎಂದು ಹೇಳಿದ್ದಾರೆ.
ಜೆಡಿಎಸ್, ಬಿಜೆಪಿಯವರೂ ಸಂಪರ್ಕದಲ್ಲಿದ್ದಾರೆ: ಬಿಜೆಪಿ, ಜೆಡಿಎಸ್ ನಾಯಕರೂ ನಮ್ಮ ಸಂಪರ್ಕದಲ್ಲಿದ್ದಾರೆ. ಚುನಾವಣೆ ಇನ್ನೂ ದೂರ ಇದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸೇರ್ಪಡೆ ಮಾಡಿಕೊಳ್ತೇವೆ. ಅವರಿಗೆ ಟಿಕೆಟ್ ನೀಡ್ತೇವೆ. ಎಷ್ಟು ಜನ ಸಂಪರ್ಕದಲ್ಲಿದ್ದಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.