Select Your Language

Notifications

webdunia
webdunia
webdunia
webdunia

ತಮಿಳುನಾಡಿನ ಮುಂದಿನ ' ಅಮ್ಮ' ಇವರೇನಾ?

ತಮಿಳುನಾಡಿನ ಮುಂದಿನ ' ಅಮ್ಮ' ಇವರೇನಾ?
ಚೆನ್ನೈ , ಗುರುವಾರ, 15 ಡಿಸೆಂಬರ್ 2016 (12:52 IST)
ತಮಿಳುನಾಡಿನ ಜನರ ಪ್ರೀತಿಯ ಅಮ್ಮ ಜೆ. ಜಯಲಲಿತಾ ಹೃದಯಾಘಾತದಿಂದ ಮರಣವನ್ನಪ್ಪುತ್ತಿದ್ದಂತೆ ಅವರ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಜಯಾ ಬಲಗೈ ಬಂಟ ಪನ್ನೀರ್ ಸೆಲ್ವಂ ಅವರಾ? ಆಪ್ತ ಗೆಳತಿ ಶಶಿಕಲಾ ಅವರಾ? ಕೆಲವರ ಪ್ರಕಾರ ಚಿತ್ರ ನಟ ಅಜಿತ್. ಆದರೆ ಇದಕ್ಕೆ ಯಾರ ಬಳಿ ಕೂಡ ಖಚಿತ ಉತ್ತರವಿಲ್ಲ ...?

 
ಮತ್ತೀಗ ಶಶಿಕಲಾ ವಿರೋಧಿ ಬಣವೊಂದು ಜಯಲಲಿತಾ ಅವರನ್ನೇ ಹೋಲುವ ಅವರ ಅಣ್ಣನ ಮಗಳು ಜೆ. ದೀಪಾ ಅವರ ಪರವಾಗಿ ಪ್ರಚಾರವನ್ನು ಆರಂಭಿಸಿದ್ದಾರೆ. 'ದೀಪಾ ಅವರೇ ನಮ್ಮ  ಮುಂದಿನ ಅಮ್ಮ' ಎಂದು ಘೋಷಿಸುತ್ತಿದ್ದಾರೆ.  
 
42 ವರ್ಷದ ದೀಪಾ ಕೂಡ ಅಗತ್ಯ ಬಿದ್ದರೆ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದರು. ಜತೆಗೆ ಜಯಾ ಮತ್ತು ನಮ್ಮ ಒಡನಾಟಕ್ಕೆ ಶಶಿಕಲಾ ಮುಳುವಾಗಿದ್ದರು. ಅವರನ್ನು ಕಾಣಲು ಸಹ ಬಿಡುತ್ತಿರಲಿಲ್ಲ. ಹಿಂದೆ ನಾವು ನಮ್ಮ ಸಂಬಂಧಿಕರು ಪೋಯಸ್ ಗಾರ್ಡನ್‌ನಲ್ಲಿ ಜಯಾ ಜತೆಗಿದ್ದೆವು. ಈಗ ಶಶಿಕಲಾ ಮತ್ತು ಆಕೆಯ ಬೆಂಬಲಿಗರು ಅಲ್ಲಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಡಲು ಸಿದ್ಧವೆಂದು ದೀಪಾ ಹೇಳಿದ್ದರು. ಮತ್ತಿಗ ಎಐಡಿಎಂಕೆಯ ಕೆಲ ನಾಯಕರು ಸಹ ದೀಪಾ ಅವರ ಬೆಂಬಲಕ್ಕೆ ನಿಂತಿದ್ದು ಶಶಿಕಲಾ ವಿರುದ್ಧ ರಣತಂತ್ರ ರೂಪಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಸಿಎಂ ಸಿದ್ದರಾಮಯ್ಯರಿಗೆ ಮಂಗಳಾರತಿ ಮಾಡಿದ ಪೂಜಾರಿ