ತಿರುಪತಿ, ಶಿರಡಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ, ಪ್ರಯಾಣಿಕರಿಗೆ ಗುಡ್‌ನ್ಯೂಸ್

Sampriya
ಮಂಗಳವಾರ, 9 ಡಿಸೆಂಬರ್ 2025 (17:34 IST)
Photo Credit X
ನವದೆಹಲಿ: ದೇಶದ ಪ್ರಮುಖ ಎರಡು ಯಾತ್ರಾ ಸ್ಥಳಗಳಾಗಿರುವ ತಿರುಪತಿ ಹಾಗೂ ಶಿರಡಿಗೆ ಸಂಪರ್ಕಿಸುವ ಎಕ್ಸ್‌ಪ್ರೆಸ್‌ಗೆ ಕೇಂದ್ರ ಸಚಿವ ವಿ.ಸೋಮಣ್ಣ ಹಸಿರು ನಿಶಾನೆ ತೋರಿದ್ದಾರೆ. 

ಇನ್ನೂ ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ಆರಂಭವು ನಾಲ್ಕು ರಾಜ್ಯಗಳ ಭಕ್ತರಿಗೆ ಐತಿಹಾಸಿಕ ದಿನವಾಗಿದೆ ಎಂದು ವಿ.ಸೋಮಣ್ಣ ಬಣ್ಣಿಸಿದ್ದಾರೆ. ಇದು ದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ಎಂಬ ನಾಲ್ಕು ರಾಜ್ಯಗಳಲ್ಲಿ ರೈಲು ಸಂಪರ್ಕವನ್ನು ಬಲಪಡಿಸುವ ಮೂಲಕ ಬಹು ದೂರಗಾಮಿ ಪ್ರಯೋಜನಗಳನ್ನು ನೀಡುತ್ತದೆ. 

ಇದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಪಟ್ಟಿಯಿಂದ ಭಕ್ತರಿಗಾಗಿ ಶಿರಡಿಗೆ ಮೊದಲ ನೇರ ರೈಲು ಸೇವೆಯನ್ನು ನೀಡಲಿದೆ. ಈ ಮೂಲಕ ತಿರುಪತಿ ಹಾಗೂ ಶಿರಡಿಯನ್ನು ನೇರವಾಗಿ ಸಂಪರ್ಕಿಸಬಹುದು. 

ಎಕ್ಸ್‌ಪ್ರೆಸ್ ರೈಲುಗೆ ಹಸಿರು ನಿಶಾನೆ ತೋರಿಸುವ ಮೂಲಕ ರೈಲು ತೀರ್ಥಯಾತ್ರೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಮಾರ್ಗದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ. ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅದಲ್ಲದೆ ದೇವಸ್ಥಾನಕ್ಕೆ ಪ್ರಯಾಣ ಬೆಳೆಸುವ ಯೋಜನೆಯಲ್ಲಿರುವವರಿಗೆ ತುಂಬಾನೇ ಸಹಕಾರಿಯಾಗಲಿದೆ.  ಹೊಸ ಸಾಪ್ತಾಹಿಕ ರೈಲು ಯಾತ್ರಿಕರಿಗೆ ಪ್ರತಿ ಮಾರ್ಗಕ್ಕೆ ಸುಮಾರು 30 ಗಂಟೆಗಳ ಪ್ರಯಾಣದ ಸಮಯದೊಂದಿಗೆ ಸುಗಮ ಪ್ರಯಾಣವನ್ನು ನೀಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

ಹಿಂದೂಗಳ ಪವಿತ್ರ ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ಜಡ್ಜ್ ವಿರುದ್ಧ ಸಹಿ ಹಾಕಿದ ರಾಜ್ಯದ ಮೂವರು ಕೈ ಸಂಸದರು ಇವರೇ

ಡಿನ್ನರ್ ಮೀಟಿಂಗ್ ನಡುವೆ ಸಿಎಂ, ಡಿಸಿಎಂಗೆ ದೆಹಲಿ ಬುಲಾವ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments