ದುಡ್ಡು ಕೊಡ್ಲಿಲ್ಲ ಎಂದು ಅಜ್ಜಿಯ ಕತ್ತು ಸೀಳಿದ ಮೊಮ್ಮಗ!

Webdunia
ಸೋಮವಾರ, 11 ಜುಲೈ 2022 (14:51 IST)
ನವದೆಹಲಿ : ಹಣ ನೀಡಲು ನಿರಾಕರಿಸಿದಕ್ಕೆ 84 ವರ್ಷದ ವೃದ್ಧೆಯನ್ನು ಆಕೆಯ ಅಪ್ರಾಪ್ತ ಮೊಮ್ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಶಾಲಿಮಾರ್ ಬಾಗ್ನಲ್ಲಿ ನಡೆದಿದೆ.

ಸರ್ಜಿಕಲ್ ಬ್ಲೇಡ್ನಿಂದ ಬಾಲಕ ತನ್ನ ಅಜ್ಜಿಯ ಕತ್ತನ್ನು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ.

ಇದೀಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವೃದ್ಧೆ ಶಾಲಿಮಾರ್ ಬಾಗ್ನಲ್ಲಿ ಒಂಟಿಯಾಗಿ ವಾಸವಿದ್ದು, ಇತ್ತೀಚೆಗೆ ಮನೆ ಮಾರಾಟ ಮಾಡಿದ್ದರು. ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕೊಲೆಯ ಹಿಂದಿನ ರಾತ್ರಿ 9:30ರ ಸುಮಾರಿಗೆ ಬಾಲಕ ಬಿಳಿ ಟವೆಲ್ನಿಂದ ಮುಖವನ್ನು ಮುಚ್ಚಿಕೊಂಡು ಮನೆಗೆ ಪ್ರವೇಶಿಸುವುದನ್ನು ನೋಡಿದ್ದಾರೆ.

ನಂತರ ರಾತ್ರಿ 11:20ಕ್ಕೆ ಹೊರಗೆ ಬಂದ ಹುಡುಗ ಮತ್ತೆ ರಾತ್ರಿ 12:20ಕ್ಕೆ ಮನೆ ಒಳಗೆ ಹೋಗಿದ್ದಾನೆ. ಈ ದೃಶ್ಯಾವಳಿಗಳನ್ನು ಮನೆಯವರಿಗೆ ತೋರಿಸಿದಾಗ ಅವರು ಶಂಕಿತನ ಗುರುತು ಬಹಿರಂಗಪಡಿಸಿದ್ದಾರೆ.

ಬಳಿಕ ಶಾಲೆಗೆ ಹೋಗಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಕೆಲ ವ್ಯಕ್ತಿಗಳಿಗೆ ಹಣ ನೀಡಬೇಕಾಗಿತ್ತು. ಹೀಗಾಗಿ ಹಣಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಟ ವಿಜಯ್ ಟಿವಿಕೆ ಪಕ್ಷಕ್ಕೆ ಎಐಎಡಿಎಂಕೆ ನಾಯಕ ಸಂಪತ್ ಸೇರ್ಪಡೆ, ಪಕ್ಷದೊಳಗೆ ಭಾರೀ ಬೆಳವಣಿಗೆ

ಹಿಂದೂ ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದು ದ್ವೇಷ ಆಗುತ್ತಾ: ಪ್ರಮೋದ್ ಮುತಾಲಿಕ್

ರೋಡ್‌ನಲ್ಲಿ ಬಿಟ್ಟು ಹೋದ ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಬಲಿ, ಆಗಿದ್ದೇನು ಗೊತ್ತಾ

ಶಬರಿಮಲೆ ಚಿನ್ನ ಕಳವು ವಿಚಾರ, ಈಗ ಮಾತನಾಡುವುದು ಸರಿಯಲ್ಲ: ಪಿಣರಾಯಿ ವಿಜಯನ್

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವಿಚಾರ ವದಂತಿ ಬೇಡ: ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments