Select Your Language

Notifications

webdunia
webdunia
webdunia
webdunia

ದೇಶದ ಅತಿ ಕಿರಿಯ ಸಂಸದನ ನಿಶ್ಚಿತಾರ್ಥ

ದೇಶದ ಅತಿ ಕಿರಿಯ ಸಂಸದನ ನಿಶ್ಚಿತಾರ್ಥ
ಗುರ್ಗಾಂವ್ , ಗುರುವಾರ, 5 ಜನವರಿ 2017 (16:59 IST)
ದೇಶದ ಅತ ಕಿರಿಯ ಸಂಸದನೆಂಬ ಹಿರಿಮೆಗೆ ಪಾತ್ರರಾಗಿರುವ ದುಷ್ಯಂತ್ ಚೌಟಾಲ ಅವರು ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಪರಮಜಿತ್ ಸಿಂಗ್ ಅಹ್ಲಾವತ್ ಪುತ್ರಿ ಮೇಘನಾ ಅಹ್ಲಾವತ್ ಜತೆಗೆ ಅವರು ಉಂಗುರ ಬದಲಾಯಿಸಿಕೊಂಡಿದ್ದಾರೆ. 

 
ಹರಿಯಾಣದ ಗುರುಗ್ರಾಮದ ಪಂಚತಾರಾ ಹೊಟೆಲೊಂದರಲ್ಲಿ ನಡೆದ ಅದ್ದೂರಿ ಕಾರ್ಯಕ್ರಮ ಬೇರ್ಪಟ್ಟಿರುವ ಪರಿವಾರದ ಮಿಲನದ ಕಾರ್ಯಕ್ರಮವಾದಂತೆ ತೋರಿಬಂತು. ಕಾರಣ ಶಿಕ್ಷಕರ ನೇಮಕ ಹಗರಣದಲ್ಲಿ ಆರೋಪ ಸಾಬೀತಾಗಿ ಜೈಲು ಪಾಲಾಗಿರುವ ದುಷ್ಯಂತ್ ತಂದೆ ಅಜಯ್ ಚೌಟಾಲ ಮತ್ತು ಅಜ್ಜ , ಹರಿಯಾಣಾದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲ ಪೆರೋಲ್ ಮೇಲೆ ಒಂದು ದಿನದ ಮಟ್ಟಿಗೆ ಹೊರಬಂದಿದ್ದರು.  
 
ಕಳೆದ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಹಿಸಾರ್‌ನಿಂದ ಸ್ಪರ್ಧಿಸಿ ಗೆದ್ದಾಗ ದುಷ್ಯಂತ್‌ಗೆ 26ರ ಪ್ರಾಯ. 16ನೇ ಲೋಕಸಭೆಯ ಅತಿ ಕಿರಿಯ ಸಂಸದನೆಂಬ ಹೆಗ್ಗಳಿಕೆ ಅವರಿಗಿದೆ. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಕಿ ಮೇಲೆ ಗ್ಯಾಂಗ್ ರೇಪ್ ಎಸಗಿ ಮೈಮೇಲೆ ಬೈಕ್ ಹರಿಸಿದರು