Select Your Language

Notifications

webdunia
webdunia
webdunia
webdunia

ಶಾಲೆಗಳಲ್ಲಿ 'ಇಟ್ಟಗುರಿ ದಿಟ್ಟ ಹೆಜ್ಜೆ' : ಆದೇಶ ವಾಪಸ್

ಶಾಲೆಗಳಲ್ಲಿ 'ಇಟ್ಟಗುರಿ ದಿಟ್ಟ ಹೆಜ್ಜೆ' : ಆದೇಶ ವಾಪಸ್
ಬೆಂಗಳೂರು , ಶುಕ್ರವಾರ, 1 ಜುಲೈ 2016 (09:53 IST)
ತೀವ್ರ ವಿವಾದಕ್ಕೆ ಕಾರಣವಾಗಿದ್ದ ಸಿಎಂ ಅವರ ಸಾಧನೆಯನ್ನೊಳಗೊಂಡ 'ಇಟ್ಟ ಗುರಿ ದಿಟ್ಟ ಹೆಜ್ಜೆ' ಪುಸ್ತಕವನ್ನು ಶಾಲೆಗಳಲ್ಲಿ ಕಡ್ಡಾಯವಾಗಿ ಖರೀದಿಸುವಂತೆ ಹೊರಡಿಸಿದ್ದ ಅದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವಾಪಸ್ ಪಡೆದುಕೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಕಟಣೆ ಹೊರಡಿಸಿದೆ.
 
ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಗ್ರಂಥಾಲಯಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಸಾಧನೆ ಕುರಿತಾದ ಪುಸ್ತಕದ ಎರಡು ಪ್ರತಿಗಳನ್ನಾದರೂ ಇಡಲೇಬೇಕೆಂದು ನಿರ್ದೇಶನ ನೀಡಲಾಗಿತ್ತು. ಈ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವತಃ ಮುಖ್ಯಮಂತ್ರಿ ಮತ್ತು ಮತ್ತು ಶಿಕ್ಷಣ ಸಚಿವರು ಈ ಸುತ್ತೋಲೆಯನ್ನು ಹೊರಡಿಸಿದ್ದುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದು ವಿವಾದಕ್ಕೆ ಮತ್ತಿಷ್ಟು ತುಪ್ಪ ಸುರಿದಿತ್ತು.
 
ಇದು ರಾಜಕೀಯ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಕ್ರಮ ಎಂದು ಆರೋಪಗಳು ಕೇಳಿ ಬಂದಿತ್ತು. ಆದರೆ ಈ ಪುಸ್ತಕ ಕೇವಲ ರೆಫರೆನ್ಸ್‌ಗಾಗಿ ಮಾತ್ರ ಎಂದು ಶಿಕ್ಷಣ ಇಲಾಖೆ ಸಮಜಾಯಿಸಿ ನೀಡಿತ್ತು 
 
ಶಿಕ್ಷಣ ಮಂತ್ರಿ  ತನ್ವೀರ್ ಸೇಠ್, ಈ ಪುಸ್ತಕ ವಿದ್ಯಾರ್ಥಿಗಳಿಗಾಗಿ ಕಡ್ಡಾಯವಲ್ಲ. ಸಿಎಂ ದೃಷ್ಟಿಕೋನವನ್ನು ಹೊಂದಿರುವ ಪ್ರತ್ಯೇಕ ಪುಸ್ತಕವಿದು. ಪಠ್ಯಕ್ರಮದ ಒಂದು ಅಧ್ಯಾಯವಲ್ಲ ಎಂದು ಹೇಳಿದ್ದರು.
 
ಈ ಕುರಿತು ಕಿಡಿಕಾರಿದ್ದ ಬಿಜೆಪಿ ಇಂತಹ ಪುಸ್ತಕಗಳು ಹೇಗೆ ಮಕ್ಕಳ ಜ್ಞಾನವನ್ನು ಹೆಚ್ಚಿಸಬಲ್ಲವು. ಈ ಪುಸ್ತಕದಿಂದ ಯಾರಿಗೆ ಉಪಯೋಗ? ಪ್ರಕಾಶಕರಿಗೋ ಅಥವಾ ಸಿಎಂ ಗೋ? ಈ  ಪುಸ್ತಕಕ್ಕಿಂತ ಶಾಲೆಯಲ್ಲಿ ಇರಲೇಬೇಕಾದ ಬಹಳಷ್ಟು ಪುಸ್ತಕಗಳಿವೆ. ಸುತ್ತೋಲೆಯನ್ನು ಹಿಂಪಡೆಯಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ನಾವು ವಿಧಾನಸಭೆಗೆ ಕೊಂಡೊಯ್ಯುತ್ತೇವೆ ಎಂದು ಗುಡುಗಿತ್ತು. 
 
ತುಮಕೂರು ಮಹಾದೇವಯ್ಯ ಪ್ರಧಾನ ಸಂಪಾದಕತ್ವ ಹಾಗೂ ಜಿಜಿ ನಾಗರಾಜು ಅವರ ಸಂಪಾದಕತ್ವದಲ್ಲಿ ಹೊರ ಬಂದಿರುವ 'ಇಟ್ಟ ಗುರಿ ದಿಟ್ಟ ಹೆಜ್ಜೆ' -ಸಮಾನತೆಯ ಸಾಧಕನ ಸಂಕಲ್ಪದ ಹಾದಿ', ಎಂಬ ಪುಸ್ತಕ ಇದಾಗಿದೆ. 300 ರೂಪಾಯಿ ಮುಖಬೆಲೆಯ ಪುಸ್ತಕದಲ್ಲಿ ಸಿದ್ದರಾಮಯಯ್ನವರನ್ನು ಮಾಜಿ ಸಿಎಂ ದೇವರಾಜ್ ಅರಸ್ ಅವರಿಗೆ ಹೋಲಿಸಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ ಸಚಿವ ಆಜಂಖಾನ್