Webdunia - Bharat's app for daily news and videos

Install App

ಪಿಒಕೆ ನಿರಾಶ್ರಿತರಿಗೆ 2000 ಕೋಟಿ ರೂ. ಪ್ಯಾಕೇಜ್‌ಗೆ ಸರ್ಕಾರದ ಯೋಜನೆ

Webdunia
ಸೋಮವಾರ, 29 ಆಗಸ್ಟ್ 2016 (11:48 IST)
ಪಾಕ್ ಆಕ್ರಮಿತ ಕಾಶ್ಮೀರದಿಂದ ನಿರಾಶ್ರಿತರಾಗಿ ಭಾರತದಲ್ಲಿ ವಾಸಿಸುತ್ತಿರುವ ಜನರ ಶ್ರೇಯೋಭಿವೃದ್ಧಿಗಾಗಿ 2000 ಕೋಟಿ ರೂ. ಪ್ಯಾಕೇಜನ್ನು ಸರ್ಕಾರ ಪ್ರಸ್ತಾಪಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ ಪ್ರದೇಶಗಳ ಜನರ ಹಕ್ಕುಗಳ ರಕ್ಷಣೆಗೆ ಪ್ರತಿಪಾದಿಸುತ್ತಿರುವ ನಡುವೆ ಸರ್ಕಾರದ ಪ್ರಸ್ತಾಪ ಹೊರಬಿದ್ದಿದೆ.

ಗೃಹಸಚಿವಾಲಯವು ಪ್ಯಾಕೇಜ್ ವಿವರಗಳನ್ನು ಕ್ಯಾಬಿನೆಟ್ ಮುಂದೆ ಅನುಮೋದನೆಗಾಗಿ ಮಂಡಿಸುವ ನಿರೀಕ್ಷೆಯಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದರು. ಜಮ್ಮು ಕಾಶ್ಮೀರ ಸರ್ಕಾರ ಇಂತಹ 36, 348 ಕುಟುಂಬಗಳನ್ನು ಗುರುತಿಸಿದ್ದು, ಅವರು ತಲಾ 5.5 ಲಕ್ಷ ರೂ. ಪಡೆಯಲಿದ್ದಾರೆ.
 
 ಬಹುತೇಕ ಮಂದಿ ಪಿಒಕೆಯ ನಿರಾಶ್ರಿತರು ಜಮ್ಮು, ಕಥುವಾ ಮತ್ತು ರಾಜೌರಿ ಜಿಲ್ಲೆಗಳಲ್ಲಿ ಅನೇಕ ಸಮಯದಿಂದ ತಂಗಿದ್ದಾರೆ. ಅವರಿಗೆ ಕಾಯಂ ನಿವಾಸಿಗಳ ಸ್ಥಾನಮಾನ ನೀಡಲಾಗಿಲ್ಲ. ಕೆಲವು ಕುಟುಂಬಗಳು 1947ರ ವಿಭಜನೆ ಕಾಲದಲ್ಲಿ ಸ್ಥಳಾಂತರಗೊಂಡಿದ್ದರೆ, ಉಳಿದವರು 1965 ಮತ್ತು 1971ರಲ್ಲಿ ಪಾಕ್ ಜತೆ ಯುದ್ಧಕಾಲದಲ್ಲಿ ಸ್ಥಳಾಂತರಗೊಂಡಿದ್ದರು. ನಿರಾಶ್ರಿತ ಜನರು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅಧಿಕಾರವಿದ್ದರೂ ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಅಧಿಕಾರವಿಲ್ಲ.
 
ನರೇಂದ್ರ ಮೋದಿ ಮೊದಲ ಬಾರಿಗೆ ಪಿಒಕೆ, ಗಿಲ್ಗಿಟ್-ಬಾಲ್ಟಿಸ್ತಾನ ಮತ್ತು ಬಲೂಚಿಸ್ತಾನದಲ್ಲಿ ವಾಸಿಸುವ ಜನರ ಸಂಕಷ್ಟಗಳ ಬಗ್ಗೆ ಆ. 12ರಂದು ಸರ್ವಸದಸ್ಯರ ಸಭೆಯಲ್ಲಿ ಗಮನಸೆಳೆದಿದ್ದರು. ಮೂರು ದಿನಗಳ ನಂತರ ಸ್ವಾತಂತ್ರ್ಯ ದಿನ ರಾಷ್ಟ್ರವನ್ನು ಉದ್ದೇಶಿಸಿದ ಭಾಷಣದಲ್ಲಿ ಪಾಕ್ ನಿಯಂತ್ರಣದಲ್ಲಿರುವ ಮೂರು ಪ್ರದೇಶಗಳನ್ನು ಮೋದಿ ಪುನಃ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments