ಪ್ರಸಕ್ತ ಸಾಲಿನಲ್ಲಿ ಕೇವಲ 251 ರೂಪಾಯಿಗಳಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಭರವಸೆ ನೀಡುವ ಮೂಲಕ ರಿಂಗಿಂಗ್ ಬೆಲ್ಸ್ ಸಂಸ್ಥೆ, ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು. ತದನಂತರ ಡೊಕ್ರೋಸ್ ಎಕ್ಸ್-1 ಹಾಗೂ ನಮೋ ಟೆಲ್ ಅಚ್ಚೆ ದಿನ ಸಂಸ್ಥೆಗಳು ಕ್ರಮವಾಗಿ 888 ಹಾಗೂ 99 ರೂಪಾಯಿಗಳಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಘೋಷಿಸಿದ್ದವು. ಇದೀಗ ಮತ್ತೊಂದು ಕಂಪೆನಿ ಸಹ ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಹೇಳಿಕೊಂಡಿದೆ.
ಚಾಂಪ್‌ಒನ್ ಹೆಸರಿನ ಕಂಪನಿ ಕೇವಲ 501 ರೂಪಾಯಿಗಳಲ್ಲಿ ಸ್ಮಾರ್ಟ್‌ಪೋನ್ ನೀಡುವುದಾಗಿ ಘೋಷಿಸಿದೆ.
ಚಾಂಪ್‌ಒನ್ ಸಿ-1 ಸ್ಮಾರ್ಟ್‌ಪೋನ್ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು ಇದರ ಲೋಗೋ ವಿನ್ಯಾಸ ಮೈಕ್ರೋಮ್ಯಾಕ್ಸ್‌ನ್ನೇ ಹೋಲುತ್ತಿದೆ. ಈ ಪೋನ್‌ಗಳು 5 ಇಂಚಿನ 720ಪಿ ಡಿಸ್‌ಪ್ಲೇ, 2 ಜಿಬಿ ರ್ಯಾಮ್ ಜೊತೆಗೆ ಮೀಡಿಯಾ ಟೆಕ್ 6735 ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ.
ಚಾಂಪ್‌ಒನ್ ಸಿ-1 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 8 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದ್ದು, 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಹೊಸ ಆವೃತ್ತಿಯ ಪೋನ್‌ಗಳು 5.1.1 ಆಂಡ್ರಾಯ್ಡ್ ಹಾಗೂ 2500 ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ವೈಶಿಷ್ಟ್ಯ ಒಳಗೊಂಡಿದೆ.
ರಾಜಸ್ತಾನ ಮೂಲದ ಕಂಪೆನಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಈ ಪೋನ್‌ಗಳ ನೋಂದಣಿಯನ್ನು ಮಾಡಿಕೊಂಡಿದೆ. ಆದರೆ, ಈ ಪೋನ್‌ಗಳು ಬಿಐಎಸ್ ಪ್ರಮಾಣೀಕರಣ ಪಟ್ಟಿಯಲ್ಲಿ ಇಲ್ಲ. ಪ್ರಾಥಮಿಕ ವರದಿಗಳ ಪ್ರಕಾರ, ಪ್ರಮೋಷನಲ್ ಆಫರ್ ಆಗಿ ಈ ಬೆಲೆಯನ್ನು ನಿಗದಿ ಪಡಿಸಿದ್ದು, ಬಳಿಕ ಈ ಪೋನ್‌ಗಳ ಬೆಲೆ 10,000 ರೂಪಾಯಿಗಳಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ