Select Your Language

Notifications

webdunia
webdunia
webdunia
webdunia

ಪಳನಿ ಸ್ವಾಮಿಗೆ ಆಹ್ವಾನ, ಪನೀರ್ ಸೆಲ್ವಂ ಬಣದ ಬಂಡಾಯ ಠುಸ್!

ಪಳನಿ ಸ್ವಾಮಿಗೆ ಆಹ್ವಾನ, ಪನೀರ್ ಸೆಲ್ವಂ ಬಣದ ಬಂಡಾಯ ಠುಸ್!
Chennai , ಗುರುವಾರ, 16 ಫೆಬ್ರವರಿ 2017 (12:23 IST)
ಚೆನ್ನೈ: ರಾಜ್ಯಪಾಲರ ಆಹ್ವಾನದ ಮೇರೆಗೆ ಸರ್ಕಾರ ರಚಿಸಲು ಹೊರಟಿರುವ ಎಐಎಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ.

 
ಇದರೊಂದಿಗೆ ತಮಿಳುನಾಡಿನ ರಾಜಕೀಯದ ಹೈಡ್ರಾಮ ಒಂದು ಹಂತಕ್ಕೆ ಬಂದು ನಿಂತಿದೆ. 124 ಶಾಸಕರ ಬೆಂಬಲ ಪತ್ರದೊಂದಿಗೆ ರಾಜಭವನಕ್ಕೆ ತೆರಳಿದ ಪಳನಿಸ್ವಾಮಿಗೆ ರಾಜ್ಯಪಾಲ ವಿದ್ಯಾಸಾಗರ ರಾವ್ ಸರ್ಕಾರ ರಚಿಸಲು ಆಹ್ವಾನ ಕೊಟ್ಟಿದ್ದಾರೆ.

ಇನ್ನೊಂದೆಡೆ ತಮಗೂ ಬಹುಮತ ಸಾಬೀತುಪಡಿಸಲು ಅವಕಾಶ ನೀಡಿ ಎಂದು ಪನೀರ್ ಸೆಲ್ವಂ ಮಾಡಿದ್ದ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಒಮ್ಮೆ ರಾಜೀನಾಮೆ ಪಡೆದ ನಂತರ ಮತ್ತೊಮ್ಮೆ ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಸೆಲ್ವಂ ಬಣದ ಮನವಿ ತಿರಸ್ಕೃತವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ರಾಜಕೀಯ ಹೈಡ್ರಾಮಾಕ್ಕೆ ತೆರೆ: ಪಳನಿಸ್ವಾಮಿ ಮುಂದಿನ ಸಿಎಂ