Select Your Language

Notifications

webdunia
webdunia
webdunia
webdunia

15 ದಿನದೊಳಗೆ ಬಹುಮತ ಸಾಬೀತುಪಡಿಸಲು ಪಳನಿಸ್ವಾಮಿಗೆ ರಾಜ್ಯಪಾಲರ ಗಡುವು

15 ದಿನದೊಳಗೆ ಬಹುಮತ ಸಾಬೀತುಪಡಿಸಲು ಪಳನಿಸ್ವಾಮಿಗೆ ರಾಜ್ಯಪಾಲರ ಗಡುವು
ಚೆನ್ನೈ , ಗುರುವಾರ, 16 ಫೆಬ್ರವರಿ 2017 (12:12 IST)
ತಮಿಳುನಾಡು ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಬಂಟ ಎಡಪ್ಪಾಡಿ ಪಳನಿಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. 15  ದಿನದೊಳಗೆ ಬಹುಮತ ಸಾಬೀತುಪಡಿಸಲು ಪಳನಿಸ್ವಾಮಿಗೆ ರಾಜ್ಯಪಾಲರ ಗಡುವು ನೀಡಿದ್ದಾರೆ.
 
ಗವರ್ನರ್ ಸಿ.ವಿದ್ಯಾಸಾಗರ್ ರಾವ್ ಇಂದು ಪಳನಿಸ್ವಾಮಿಗೆ ಸರಕಾರ ರಚಿಸುವ ಆಹ್ವಾನ ನೀಡಿದ್ದಾರೆ.ಇಂದು ಸಂಜೆ 4.30 ಕ್ಕೆ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಭಾವಿ ಸಿಎಂ ಪಳನಿಸ್ವಾಮಿ ತಮ್ಮೊಂದಿಗೆ 124 ಶಾಸಕರ ಬಲವಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ, ಸರಕಾರ ರಚನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.
 
ತಮಿಳುನಾಡು ರಾಜಕೀಯ ಬಿಕ್ಕಟ್ಟಿನಲ್ಲಿ ಶಶಿಕಲಾ ಬಣದ ಕೈ ಮೇಲಾಗಿದ್ದು, ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬಣದ ಬಲ ಕುಸಿದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ರಾಜಕೀಯ ಹೈಡ್ರಾಮಾಕ್ಕೆ ತೆರೆ! ಎಡಪ್ಪಾಡಿ ಪಳನಿ ಸ್ವಾಮಿ ಸಿಎಂ